ರಾಜಕಾರಣ ಸರಿಯಾಗಿಲ್ಲ ಸಾಕಾಗಿದೆ, ಲೋಕ ಸಭಾ ಚುನಾವಣೆಗೆ ಬೇರೆ ಅಭ್ಯರ್ಥಿಯನ್ನು ಪಕ್ಷ ಸೂಚಿಸಿದರೆ ಬೆಂಬಲ ನೀಡುವೆ: ಡಿಕೆ ಸುರೇಶ್
ಅಧಿಕಾರದ ಈ ಕೊನೆಯ ವರ್ಷದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಡಿಕೆ ಸುರೇಶ್ ಹೇಳಿದರು.
ರಾಮನಗರ: ಸಂಸದ ಡಿಕೆ ಸುರೇಶ್ (DK Suresh) ಅವರಿಗೆ ರಾಜಕೀಯದ ಮೇಲೆ ವೈರಾಗ್ಯ ಮೂಡಿದೆ! ಇದನ್ನು ನಾವು ಹೇಳುತ್ತಿಲ್ಲ, ಖದ್ದು ಸಂಸದರೇ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಹೇಳಿದರು. ರಾಜಕಾರಣ (politics) ಸಾಕಾಗಿದೆ, ಅದು ಚೆನ್ನಾಗಿಲ್ಲ, ಲೋಕ ಸಭಾ ಚುನಾವಣೆಗೆ (Lok Sabha Polls) ಇನ್ನೂ ಒಂದು ವರ್ಷವಿದೆ, ಪಕ್ಷದ ಕಾರ್ಯಕರ್ತರು, ಮುಖಂಡರು ಬೇರೊಬ್ಬ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಖಂಡಿತ ಬೆಂಬಲ ನೀಡುವುದಾಗಿ ಸುರೇಶ್ ಹೇಳಿದರು. ಆದರೆ, ಚುನಾವಣೆ ಸ್ಪರ್ಧಿಸದಿರುವ ಬಗ್ಗೆ ಇನ್ನೂ ತೀರ್ಮಾನ ತೆಗೆದಿಕೊಂಡಿಲ್ಲ ಅಂತಲೂ ಅವರು ಹೇಳಿದರು. ಅಧಿಕಾರದ ದಾಹ ಇರೋರಿಗೆ ರಾಜಕೀಯ ಮಾಡಬೇಕೆಂಬ ಉದ್ದೇಶವಿರುತ್ತದೆ ಆದರೆ ತನಗೆ ಅಧಿಕಾರ ದಾಹವಿಲ್ಲ, ಅಭಿವೃದ್ಧಿ ದಾಹ ಇದೆ, ಅಧಿಕಾರದ ಈ ಕೊನೆಯ ವರ್ಷದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಡಿಕೆ ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್ನ್ಯೂಸ್: ವಿಡಿಯೋ ನೋಡಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
