ಪಕ್ಷಕ್ಕೆ ಸೇರುವವರ ಜಾತಕ, ಕುಂಡಲಿ ನೋಡಬೇಕಾ? ಪ್ರತಾಪ್ ಸಿಂಹ, ಸಂಸದ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 03, 2022 | 1:33 PM

ಪಕ್ಷಕ್ಕೆ ಬರುವವವರ ಇತಿಹಾಸ, ಜಾತಕ, ಕುಂಡಲಿ ಮೊದಲಾದವುಗಳನ್ನು ನೋಡುತ್ತಾ ಕೂರೋದಿಕ್ಕಾಗುತ್ತಾ ಅಂತ ಸಂಸದ ತಾವು ಮಾಡಿದ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾರೆ!

ಮೈಸೂರು: ರೌಡಿಶೀಟರ್ ಗಳು ಬಿಜೆಪಿ ಸೇರಿರುವುದಕ್ಕೆ ಸೇರುತ್ತಿರುವುದಕ್ಕೆ ಪಕ್ಷದ ನಾಯಕರು ನೀಡುತ್ತಿರುವ ಸಬೂಬು, ವಿವರಣೆ ಮತ್ತು ಸಮರ್ಥನೆಗಳು ಆಶ್ಚರ್ಯ ಹುಟ್ಟಿಸುವುದರ ಜೊತೆಗೆ ಗಾಬರಿಗೊಳಿಸುತ್ತವೆ. ಮೈಸೂರು (Mysuru) ಭಾಗದಲ್ಲಿ ಇತ್ತೀಚಿಗೆ ಒಂದಷ್ಟು ಜನ ಬಿಜೆಪಿ ಸೇರಿದ್ದಾರೆ, ಅವರಲ್ಲೊಬ್ಬ ರೌಡಿಶೀಟರ್ (Rowdy Sheeter) ಆಗಿದ್ದು ಅವನ ಹೆಸರು ಬೆತ್ತನಗೆರೆ ಶಂಕರ. ಅವನಿಗೆ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha), ಆಗಿರುವ ಪ್ರಮಾದವನ್ನು ತಮ್ಮ ಕಾರ್ಯಕರ್ತನೊಬ್ಬನ ತಲೆಗೆ ಕಟ್ಟಲು ಪ್ರಯತ್ನಿಸಿದ್ದಾರೆ. ಆಮೇಲೆ ಅವರು, ಪಕ್ಷಕ್ಕೆ ಬರುವವವರ ಇತಿಹಾಸ, ಜಾತಕ, ಕುಂಡಲಿ ಮೊದಲಾದವುಗಳನ್ನು ನೋಡುತ್ತಾ ಕೂರೋದಿಕ್ಕಾಗುತ್ತಾ ಅಂತ ತಾವು ಮಾಡಿದ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ