ಸಂಸದ ಪ್ರತಾಪ್ ಸಿಂಹ ಯಾವತ್ತಾದರೂ ಕಾವೇರಿ ಜಲ ವಿವಾದದ ಬಗ್ಗೆ ಮಾತಾಡಿದ್ದಾರಾ? ಸಿಎಂ ಇಬ್ರಾಹಿಂ

|

Updated on: Oct 04, 2023 | 4:28 PM

ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜೊತೆ ಮಾತಾಡಲಿ ಎಂದು ಹೇಳುವ ರಾಜ್ಯದ ಬಿಜೆಪಿ ನಾಯಕರು ಒಂದು ನಿಯೋಗ ರಚಿಸಿಕೊಂಡು ಪ್ರಧಾನಿಯವರನ್ನು ಯಾಕೆ ಭೇಟಿಯಾಗಬಾರದು ಎಂದು ಇಬ್ರಾಹಿಂ ಕೇಳಿದರು. ಅಸಲು ವಾಸ್ತವಾಂಶವೇನೆಂದರೆ, ರಾಜ್ಯದಲ್ಲಿ ಬಿಜೆಪಿ ನಿಶಕ್ತಗೊಂಡಿದೆ ಮತ್ತು ರಾಜ್ಯದಲ್ಲಿ ಅದರ ನಾಯಕರು ಸಹ ದುರ್ಬಲರು, ಹಾಗಾಗೇ ಅವರು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಇಬ್ರಾಹಿಂ ಹೇಳಿದರು.

ಬೆಂಗಳೂರು: ಹಲವಾರು ವಿಷಯಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ (Pratap Simha) ಯಾವತ್ತಾರೂ ಕಾವೇರಿ ನದಿ ನೀರು ವಿವಾದದ ಬಗ್ಗೆ ಮಾತಾಡಿದ್ದಾರಾ? ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಪ್ರಶ್ನಿಸಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಇಬ್ರಾಹಿಂ, ಮೇಕೆದಾಟು, ಮಹಾದಾಯಿ ಮತ್ತು ರಾಷ್ಟ್ರೀಯ ಯೋಜನೆಯೆಂದು ಘೋಷಣೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಗ್ಗೆ ಸಂಸದ ಯಾಕೆ ಮಾತಾಡಲ್ಲ? ಭದ್ರಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ತೆಗೆದಿರಿಸಲಾಗಿದ್ದರೂ ಇದುವರೆಗೆ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ ಎಂದು ಇಬ್ರಾಹಿಂ ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜೊತೆ ಮಾತಾಡಲಿ ಎಂದು ಹೇಳುವ ರಾಜ್ಯದ ಬಿಜೆಪಿ ನಾಯಕರು ಒಂದು ನಿಯೋಗ ರಚಿಸಿಕೊಂಡು ಪ್ರಧಾನಿಯವರನ್ನು ಯಾಕೆ ಭೇಟಿಯಾಗಬಾರದು ಎಂದು ಇಬ್ರಾಹಿಂ ಕೇಳಿದರು. ಅಸಲು ವಾಸ್ತವಾಂಶವೇನೆಂದರೆ, ರಾಜ್ಯದಲ್ಲಿ ಬಿಜೆಪಿ ನಿಶಕ್ತಗೊಂಡಿದೆ ಮತ್ತು ರಾಜ್ಯದಲ್ಲಿ ಅದರ ನಾಯಕರು ಸಹ ದುರ್ಬಲರು, ಹಾಗಾಗೇ ಅವರು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಇಬ್ರಾಹಿಂ ಹೇಳಿದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on