IPL 2026 Final: ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್; ವಿಡಿಯೋ

Updated on: Jun 01, 2026 | 6:26 PM

Mr. Nags' Hilarious RCB Final Recap: ಆರ್‌ಸಿಬಿ ತಂಡದ ನಗೆಮುಖ, ಡ್ಯಾನಿಶ್ ಸೇಠ್ ಅಲಿಯಾಸ್ ಮಿ. ನಾಗ್ಸ್, ಐಪಿಎಲ್ ಫೈನಲ್ ಗೆಲುವಿನ ನಂತರ ತಮ್ಮ ಎಂದಿನ ಕಿತಾಪತಿಯಲ್ಲಿ ನಿರತರಾಗಿದ್ದಾರೆ. ಅವರು ಆರ್‌ಸಿಬಿ ಆಟಗಾರರನ್ನು ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದು, ಈಗ ಹೊಸ ಮಾಲೀಕರಾದ ಆರ್ಯಮಾನ್ ಬಿರ್ಲಾ ಮತ್ತು ಅನನ್ಯಶ್ರೀ ಬಿರ್ಲಾ ಅವರನ್ನು ಸಹ ಚೇಷ್ಟೆಯ ಪ್ರಶ್ನೆಗಳಿಂದ ಕಾಡಿದ್ದಾರೆ. ಈ ಹಾಸ್ಯಮಯ ವಿಡಿಯೋ ವೈರಲ್ ಆಗಿದೆ, ಅಭಿಮಾನಿಗಳಿಗೆ ನಗೆ ಹಬ್ಬ ಉಂಟುಮಾಡಿದೆ.

ತನ್ನದೇ ಆಟಗಾರರ ಕಾಲೆಳೆದು ನಗೆ ಚಟಾಕಿ ಹಾರಿಸಲೆಂದೇ ಕಲಾವಿದನೊಬ್ಬನನ್ನು ತಂಡಕ್ಕೆ ಸೇರಿಸಿಕೊಂಡಿರುವ ಏಕೈಕ ಐಪಿಎಲ್ ಫ್ರಾಂಚೈಸಿಯೇ ಎಂದರೆ ಅದು ಆರ್​ಸಿಬಿ. 2014 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡ ನಿರೂಪಕ ಮತ್ತು ಹಾಸ್ಯಗಾರ ಡ್ಯಾನಿಶ್ ಸೇಠ್ ಕಿತಾಪತಿ ಮಾಡುವುದರಿಂದಲೇ ಫೇಮಸ್. ಆರ್​ಸಿಬಿ ಪಾಳಯದಲ್ಲಿ ಮಿ. ನಾಗ್ಸ್ ಎಂದೇ ಖ್ಯಾತರಾಗಿರುವ ಡ್ಯಾನಿಶ್ ಸೇಠ್ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಕ್ಯಾಂಪ್​​ಗೆ ಭೇಟಿ ನೀಡಿ ತಂಡದ ಆಟಗಾರರ ಕಾಲೆಳೆಯುತ್ತಾ, ಜನರನ್ನು ರಂಚಿಸುತ್ತಿರುತ್ತಾರೆ. ಅದರಂತೆ ಈ ಭಾರಿಯ ಐಪಿಎಲ್​ನಲ್ಲೂ ಅದೇ ಕೆಲಸ ಮಾಡಿರುವ ಡ್ಯಾನಿಶ್ ಸೇಠ್ ಫೈನಲ್​ನಲ್ಲಿ ಆರ್​ಸಿಬಿ ಗೆದ್ದ ಬಳಿಕ ಪ್ರತಿಯೊಬ್ಬ ಆಟಗಾರನನ್ನು ತನ್ನದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. ಇಲ್ಲಿಗೆ ನಿಲ್ಲದ ನಾಗ್ಸ್ ತಂಡದ ನೂತನ ಮಾಲೀಕರು ಹಾಗೂ ಅಧ್ಯಕ್ಷರು ಆಗಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ ಹಾಗೂ ಅವರ ಸಹೋದರಿ ಅನನ್ಯಶ್ರೀ ಬಿರ್ಲಾ ಅವರನ್ನು ಚೇಷ್ಟೇಯ ಪ್ರಶ್ನೆಗಳ ಮೂಲಕ ಕಾಡಿದ್ದಾರೆ. ಅದರ ವಿಡಿಯೋವನ್ನು ಆರ್​ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗಿದ್ರೆ ಮಿ. ನಾಗ್ಸ್ ತಮ್ಮ ಕಿತಾಪತಿಯ ಪ್ರಶ್ನೆಗಳ ಮೂಲಕ ಯಾವೆಲ್ಲ ಆಟಗಾರರನ್ನು ಹೇಗೆಲ್ಲ ಕಾಡಿದರು ಎಂಬುದನ್ನು ನೋಡಿ.

Published on: Jun 01, 2026 06:25 PM
Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More