ಮುರುಘಾ ಶ್ರೀ ಪೋಕ್ಸೋ ಪ್ರಕರಣ: ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಚಿತ್ರದುರ್ಗ ಎಸ್ ಪಿಗೆ ನೋಟೀಸ್
ಹಲವು ಪ್ರಶ್ನೆಗಳನ್ನು ನೋಟೀಸ್ ನಲ್ಲಿ ಎತ್ತಿರುವ ಆಯೋಗವು 7 ದಿನಗಳಲ್ಲಿ ಉತ್ತರಿಸುವಂತೆ ಪರಶುರಾಮ್ ಅವರಿಗೆ ಸೂಚಿಸಿದೆ.
ಮುರುಘಾಮಠದ ಸ್ವಾಮೀಜಿಗಳ ವಿರುದ್ಧ ದಾಖಲಾಗಿರುವ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ (ಎನ್ ಸಿ ಪಿ ಸಿ ಆರ್) (NCPCR) ಚಿತ್ರದುರ್ಗದ ಎಸ್ ಪಿ ಪರಶುರಾಮ್ ಅವರಿಗೆ ನೋಟೀಸ್ ಜಾರಿಮಾಡಲಾಗಿದೆ. ಪ್ರಕರದ ತನಿಖೆ ಸೂಕ್ತವಾದ ರೀತಿಯಲ್ಲಿ ಆಗುತ್ತಿಲ್ಲ ಎಂಬ ಸಾರ್ವಜನಿಕ ಆರೋಪಗಳ ಹಿನ್ನೆಲೆಯಲ್ಲಿ ಎನ್ ಸಿ ಪಿ ಸಿ ಆರ್ ಸುವೋ ಮೋಟು ಪ್ರಕರಣ ದಾಖಲಿಸಿಕೊಂಡು ನೋಟೀಸ್ ಜಾರಿ ಮಾಡಿದೆ. ಹಲವು ಪ್ರಶ್ನೆಗಳನ್ನು ನೋಟೀಸ್ ನಲ್ಲಿ ಎತ್ತಿರುವ ಆಯೋಗವು 7 ದಿನಗಳಲ್ಲಿ ಉತ್ತರಿಸುವಂತೆ ಪರಶುರಾಮ್ ಅವರಿಗೆ ಸೂಚಿಸಿದೆ.