ಇದು ಹಿಂದೂ ರಾಷ್ಟ್ರ, ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್
ಖ್ಯಾತ ಕನ್ನಡಕ ಬ್ರ್ಯಾಂಡ್ 'ಲೆನ್ಸ್‌ಕಾರ್ಟ್' (Lenskart) ಈಗ ವಿವಾದದ ಸುಳಿಯಲ್ಲಿದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ಬೊಟ್ಟು, ತಿಲಕವಿಡುವುದಕ್ಕೆ ನಿಷೇಧ ಹೇರಿದೆ, ಆದ್ರೆ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಿದ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಮಳಿಗೆಯೊಂದಕ್ಕೆ ಪ್ರತಿಭಟನಾಕಾರರ ಗುಂಪು ನುಗ್ಗಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ನಾಜಿಯಾ ಇಲಾಹಿ ಖಾನ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಗುಂಪು ಮಳಿಗೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ವಾತಾವರಣ ಉದ್ವಿಗ್ನಗೊಂಡಿತು. ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಒಳಬಂದ ಗುಂಪು, ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿತು.
ಮುಂಬೈ, ಏಪ್ರಿಲ್ 21: ಖ್ಯಾತ ಕನ್ನಡಕ ಬ್ರ್ಯಾಂಡ್ ‘ಲೆನ್ಸ್‌ಕಾರ್ಟ್’ (Lenskart) ಈಗ ವಿವಾದದ ಸುಳಿಯಲ್ಲಿದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ಬೊಟ್ಟು, ತಿಲಕವಿಡುವುದಕ್ಕೆ ನಿಷೇಧ ಹೇರಿದೆ, ಆದ್ರೆ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಿದ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಮಳಿಗೆಯೊಂದಕ್ಕೆ ಪ್ರತಿಭಟನಾಕಾರರ ಗುಂಪು ನುಗ್ಗಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ನಾಜಿಯಾ ಇಲಾಹಿ ಖಾನ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಗುಂಪು ಮಳಿಗೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ವಾತಾವರಣ ಉದ್ವಿಗ್ನಗೊಂಡಿತು. ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಒಳಬಂದ ಗುಂಪು, ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿತು.
ನಾಜಿಯಾ ಇಲಾಹಿ ಖಾನ್ ಅವರು ಮಳಿಗೆಯ ಫ್ಲೋರ್ ಮ್ಯಾನೇಜರ್ ಮೊಹ್ಸಿನ್ ಖಾನ್ ಅವರನ್ನು ನೇರವಾಗಿ ಪ್ರಶ್ನಿಸಿದರು. ಉದ್ಯೋಗಿಗಳು ತಿಲಕ ಇಡುವುದನ್ನು ನೀವು ನಿಷೇಧಿಸಿದ್ದೀರಾ, ನೀವು ಮೊಹ್ಸಿನ್ ಖಾನ್ ಆಗಿರುವುದರಿಂದ ಹೀಗೆ ಮಾಡುತ್ತಿದ್ದೀರಾ, ಎಂದು ತೀಕ್ಷ್ಣವಾಗಿ ಕೇಳಿದರು. ಘಟನೆಯ ಸಮಯದಲ್ಲಿ ನಾಜಿಯಾ ಖಾನ್ ಅವರು ಅಲ್ಲಿನ ಹಿಂದೂ ಉದ್ಯೋಗಿಗಳನ್ನು ಮುಂದೆ ಕರೆದು, ಅವರ ಹಣೆಗೆ ತಿಲಕ ಹಚ್ಚಿದರು.ಈ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ತೀವ್ರ ಮುಜುಗರಕ್ಕೆ ಒಳಗಾದಂತೆ ಕಂಡರೂ, ಪ್ರತಿಭಟನಾಕಾರರ ಆಕ್ರೋಶಕ್ಕೆ ಹೆದರಿ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ.
ಮಳಿಗೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಾಜಿಯಾ ಖಾನ್, ಇದು ಹಿಂದೂ ರಾಷ್ಟ್ರ. ಇಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ. ಲೆನ್ಸ್‌ಕಾರ್ಟ್ ಮಾಲೀಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದರೆ ದೇಶಾದ್ಯಂತ ಇರುವ ಅವರ ಮಳಿಗೆಗಳನ್ನು ಮುಚ್ಚಿಸಲಾಗುವುದು ಅಥವಾ ಜನರು ಈ ಬ್ರ್ಯಾಂಡ್ ಅನ್ನು ಬಹಿಷ್ಕರಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

