ಮಂಡ್ಯದ ಬೀಡಿ ಕಾಲೋನಿಯಲ್ಲಿ ಮುಸಲ್ಮಾನರೇ ಗಣೇಶನ ಪ್ರತಿಷ್ಠಾಪನೆ ಮಾಡಿ ನೈವೇದ್ಯ ಹಂಚುತ್ತಿದ್ದಾರೆ!
ಮಂಟಪದ ಹೊರಭಾಗದಲ್ಲಿ ಮುಸಲ್ಮಾನ ಬಾಂಧವರು ಹಿಂದೂ ಭಕ್ತರಿಗೆ ನೈವೇದ್ಯ ಹಂಚುತ್ತಿರುವುದು ಒಂದು ಅಪರೂಪ ಮತ್ತು ಸ್ಮರಣೀಯ ದೃಶ್ಯ.
ಮಂಡ್ಯದಲ್ಲಿ (Mandya) ಹಿಂದೂ-ಮುಸ್ಲಿಂ (Hindu-Muslim) ಸಮುದಾಯಗಳ ನಡುವಿನ ಭಾವೈಕ್ಯತೆ, ಎರಡು ಧರ್ಮಗಳ ನಡುವಿನ ಪ್ರೀತಿ-ವಿಶ್ವಾಸಕ್ಕೆ ಜ್ವಲಂತ ನಿದರ್ಶನ ಸಿಕ್ಕಿದೆ. ಆ ಉದಾಹರಣೆಯನ್ನು ದೇಶದೆಲ್ಲೆಡೆ ಅನುಸರಿಸಿದರೆ ನಾಡಿನಲ್ಲಿ ಶಾಂತಿ ಸೌಹಾರ್ದತೆ ನೆಲೆಸುವುದರಲ್ಲಿ ಎರಡು ಮಾತಿಲ್ಲ ಮಾರಾಯ್ರೇ. ಸಕ್ಕರೆನಾಡಿನ ಬೀಡಿ ಕಾಲೋನಿಯಲ್ಲಿ ಮುಸಲ್ಮಾನರೇ ಗಣೇಶನನ್ನು (Ganesh) ಪ್ರತಿಷ್ಠಾಪಿಸಿ ಅರ್ಚಕರಿಂದ ಪೂಜೆ ಮಾಡಿಸಿದ್ದಾರೆ. ಮಂಟಪದ ಹೊರಭಾಗದಲ್ಲಿ ಮುಸಲ್ಮಾನ ಬಾಂಧವರು ಹಿಂದೂ ಭಕ್ತರಿಗೆ ನೈವೇದ್ಯ ಹಂಚುತ್ತಿರುವುದು ಒಂದು ಅಪರೂಪ ಮತ್ತು ಸ್ಮರಣೀಯ ದೃಶ್ಯ.