ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸಂಚು ಹೂಡಿದ ಆರೋಪಿ ಮನ್ಮಿತ್ ರೈಗೆ ತನ್ನ ಮಾಮ ಮುತ್ತಪ್ಪ ರೈಯಂತೆ ಖ್ಯಾತನಾಗುವಾಸೆ!

ಅವರ ಬಾಡಿಗಾರ್ಡ್ ಗಳ ಪಡೆಯನ್ನು ಒಮ್ಮೆ ನೋಡಿ. ಯಾವ ವಿ ವಿ ಐಪಿ ಗೂ ಕಮ್ಮಿ ಇಲ್ಲ ಮಾರಾಯ್ರೇ. ಅಂದಹಾಗೆ ಗುಣರಂಜನ್ ಶೆಟ್ಟಿ ಅವರು ಮುತ್ತಪ್ಪ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

TV9kannada Web Team

| Edited By: Arun Belly

Jun 14, 2022 | 10:47 AM

Mangaluru: ಪ್ರಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ಸಹೋದರ ಗುಣರಂಜನ್ ಶೆಟ್ಟಿಯ (Gunaranjan Shetty) ಕೊಲೆಗೆ ಸಂಚು ನಡೆಸಿದ ಅರೋಪ ಎದುರಿಸುತ್ತಿರುವ ಮನ್ಮಿತ್ ರೈಗೆ (Manmit Rai) ಸಂಬಂಧದಲ್ಲಿ ತನಗೆ ಮಾಮನಾಗುವ ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ (Muthappa Rai) ಅವರಂತೆಯೇ ಖ್ಯಾತನಾಗಿ ಮೆರೆಯಬೇಕೆಂಬ ಉತ್ಕಟ ಆಸೆ ಇದೆ. ಹಾಗಾಗೇ, ಪಡ್ಡೆಗಳ ಗುಂಪು ಕಟ್ಟಿಕೊಂಡು ಓಡಾಡುತ್ತಾರೆ ಮತ್ತು ಅವರಿಗೆ ಧನಸಹಾಯ ಕೂಡ ಮಾಡುತ್ತಿರುತ್ತಾರೆ. ಅವರ ಬಾಡಿಗಾರ್ಡ್ ಗಳ ಪಡೆಯನ್ನು ಒಮ್ಮೆ ನೋಡಿ. ಯಾವ ವಿ ವಿ ಐಪಿ ಗೂ ಕಮ್ಮಿ ಇಲ್ಲ ಮಾರಾಯ್ರೇ. ಅಂದಹಾಗೆ ಗುಣರಂಜನ್ ಶೆಟ್ಟಿ ಅವರು ಮುತ್ತಪ್ಪ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada