Karnataka Budget 2024: ಸಮಗ್ರ ಮತ್ತು ಸಮೃದ್ಧ ಕರ್ನಾಟಕ ಕಲ್ಪಿಸುವ ಕಲ್ಯಾಣ ಆಧಾರಿತ ಬಜೆಟ್ ಮಂಡಿಸಿದ್ದೇನೆ: ಸಿದ್ದರಾಮಯ್ಯ

|

Updated on: Feb 16, 2024 | 3:55 PM

Karnataka Budget 2024: ಗಾಂಧಿಯವರು ಹೇಳಿದ ಮತ್ತು ನೆಹರೂ ಪುನರುಚ್ಛರಿಸಿದ ಮಾತುಗಳನ್ನು ಹೇಳುತ್ತಾ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿದರು. ಬಡವರ ಕಣ್ಣೀರು ಒರೆಸುವ ಪ್ರಯತ್ನ ನಾವು ಮಾಡಬೇಕು, ಅವರ ಕಣ್ಣೀರು ಒರೆಸದೆ, ಅವರ ಬವಣೆಗಳಿಗೆ ಸ್ಪಂದಿಸದೆ ಹೋದರೆ ನಾವು ಮಾಡುವದೆಲ್ಲ ವ್ಯರ್ಥ ಅಂತ ಗಾಂಧಿ ಹೇಳಿದ್ದನ್ನು ನೆಹರೂ ಒಮ್ಮೆ ಪುನರಿಚ್ಛರಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ವಯಸ್ಸಿನ್ಲಲಿ ಸದನದ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ (Siddaramaiah ) ಮೂರು ಗಂಟೆಗಳಿಗಿಂತ ಹೆಚ್ಚಿನ ಅವಧಿವರೆಗೆ ನಿಂತುಕೊಂಡು ಬಜೆಟ್ ಭಾಷಣ (Budget speech) ಓದುವಾಗ ದಣಿವಾಗಲಿಲ್ಲ. ಆದರೆ, ಭಾಷಣ ಮುಗಿಸಿ ತಮ್ಮ ಸೀಟಿನ ಮೇಲೆ ಆಸೀನರಾದ ಅವರಿಗೆ ಗಂಟಲಾರಿಸಿಕೊಳ್ಳಲು 2 ಲೋಟ ನೀರು ಬೇಕಾಯಿತು! ಭಾಷಣದ ಅಂತ್ಯವನ್ನು ಮಹಾತ್ಮಾ ಗಾಂಧಿ (Mahatma Gandhi) ಮತ್ತು ಪಂಡಿತ ಜವಾಹರಲಾಲ್ ನೆಹರೂ (Pundit Jawaharlal Nehru) ಹೆಸರುಗಳನ್ನು ಉಲ್ಲೇಖಿಸುತ್ತಾ ಮಾಡಿದರು. ಗಾಂಧಿಯವರು ಹೇಳಿದ ಮತ್ತು ನೆಹರೂ ಪುನರುಚ್ಛರಿಸಿದ ಮಾತುಗಳನ್ನು ಹೇಳುತ್ತಾ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿದರು. ಬಡವರ ಕಣ್ಣೀರು ಒರೆಸುವ ಪ್ರಯತ್ನ ನಾವು ಮಾಡಬೇಕು, ಅವರ ಕಣ್ಣೀರು ಒರೆಸದೆ, ಅವರ ಬವಣೆಗಳಿಗೆ ಸ್ಪಂದಿಸದೆ ಹೋದರೆ ನಾವು ಮಾಡುವದೆಲ್ಲ ವ್ಯರ್ಥ ಅಂತ ಗಾಂಧಿ ಹೇಳಿದ್ದನ್ನು ನೆಹರೂ ಒಮ್ಮೆ ಪುನರಿಚ್ಛರಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ನೆಹರೂ ಅವರ ಆಶಯದಂತೆ, ಹಣದುಬ್ಬರ, ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರಿಗೂ ನ್ಯಾಯ ಒದಗಿಸುವ, ಸಮಾಜದ ಕಟ್ಟಕಡೆಯ ವರ್ಗಗಳಿಗೆ ತಲುಪುವ ಬಜೆಟ್ ಮಂಡಿಸಿದ್ದೇನೆ, ಸಮಗ್ರ ಮತ್ತು ಸಮೃದ್ಧ ಕರ್ನಾಟಕದ ಪರಿಕಲ್ಪನೆಯೊಂದಿಗೆ ಕಲ್ಯಾಣ ಆಧಾರಿತ ಬಜೆಟ್ ರಾಜ್ಯದ ಜನತೆಗೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು. ಬಜೆಟ್ ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಪ್ರತಿಯೊಬ್ಬ ಸದಸ್ಯನ ಸಹಕಾರ ಕೋರುತ್ತಾ ಇದನ್ನು ಸದನದ ಪರಿಗಣನೆಗೆ ಸಲ್ಲಿಸುತ್ತೇನೆ ಅಂತ ಹೇಳಿ, ಜೈ ಹಿಂದ್ ಜೈ ಕರ್ನಾಟಕ ಘೋಷಣೆಯೊಂದಿಗೆ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿದರು. ಅವರು ಕೂರುತ್ತಿದ್ದಂತೆಯೇ ಸಭಾಧ್ಯಕ್ಷ ಯುಟಿ ಖಾದರ್ ಸದನವನ್ನು ಸೋಮವಾರ ಬೆಳಗ್ಗೆ 10.15 ವರೆಗೆ ಮುಂದೂಡಿದ ಘೋಷಣೆ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 16, 2024 03:14 PM