ನನ್ನ ತಂದೆ ಲಿಂಗಾಯತ ಅಧಿಕಾರಿಗಳ ಬಗ್ಗೆ ಮಾತಾಡಿದ್ದು ಮುಗಿದ ಅಧ್ಯಾಯ: ಎಸ್ ಎಸ್ ಮಲ್ಲಿಕಾರ್ಜುನ, ಸಚಿವ

|

Updated on: Oct 05, 2023 | 4:43 PM

ದಾವಣಗೆರೆ ಜಿಲ್ಲಾಧಿಕಾರಿ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಅಥವಾ ಬೇರೆ ಸಮುದಾಯದವರೇ ಅಂತ ಅವರು ಹೇಳಲಿಲ್ಲ. ತನ್ನ ತಂದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಹಿರಿಯ ನಾಯಕರು ಮತ್ತು ಅನುಭವಸ್ಥರು ವಿಷಯವನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಅದೀಗ ಮುಗಿದ ಅಧ್ಯಾಯ ಎಂದು ಮಲ್ಲಿಕಾರ್ಜುನ ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಲಿಂಗಾಯತ ಅಧಿಕಾರಿಗಳಿಗೆ (Lingayat Officials) ಅನ್ಯಾಯವಾಗುತ್ತಿದೆ ಅಂತ ಹೇಳಿ ವಿವಾದ ಸೃಷ್ಟಿಸಿದ ಬಳಿಕ ಕಾಂಗ್ರೆಸ್ ನಾಯಕರು, ಶಾಸಕರು ತಲೆಗೊಂದು ಅಭಿಪ್ರಾಯವನ್ನು ಮಾಧ್ಯಮದವರಿಗೆ ಹೇಳಿದರು. ಆದರೆ ಅವರ ಮಗ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ (SS Mallikarjun) ಮಿಡಿಯಾ ಕೈಗೆ ಸಿಕ್ಕಿರಲಿಲ್ಲ. ಬೆಂಗಳೂರಲ್ಲಿಂದು ಅವರನ್ನು ಘೇರಾಯಿಸಿದ ಸುದ್ದಿಗಾರರು ಅದೇ ಪ್ರಶ್ನೆ ಕೇಳಿದರು. ಅದು ಅವರ ವೈಯಕ್ತಿಕ ಅಭಿಪ್ರಾಯ, ಮುಗಿದ ಅಧ್ಯಾಯ, ಅದನ್ಯಾಕೆ ಮತ್ತೇ ಕೆದಕ್ತಾ ಇದ್ದೀರಿ ಅಂತೆಲ್ಲ ಹೇಳಿ ಪಲಾಯನವಾದಕ್ಕೆ ಜೋತುಬಿದ್ದರು. ಆದರೆ, ಮಾಧ್ಯಮ ಪ್ರತಿನಿಧಿಗಳು ಅವರನ್ನು ಅಲ್ಲಿಗೆ ಬಿಡುವಂತಿರಲಿಲ್ಲ. ದಾವಣಗೆರೆಗೆ ಲಿಂಗಾಯತ ಜಿಲ್ಲಾಧಿಕಾರಿ ಬೇಕೆಂದು ಶಿವಶಂಕರಪ್ಪ ಕೇಳಿದ್ದಾರೆ ಅಂತ ಹೇಳಿದಾಗ ಮಲ್ಲಿಕಾರ್ಜುನ ಇದ್ದಾರಲ್ಲ ಅಂತಷ್ಟೇ ಹೇಳಿದರು. ದಾವಣಗೆರೆ ಜಿಲ್ಲಾಧಿಕಾರಿ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಅಥವಾ ಬೇರೆ ಸಮುದಾಯದವರೇ ಅಂತ ಅವರು ಹೇಳಲಿಲ್ಲ. ತನ್ನ ತಂದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಹಿರಿಯ ನಾಯಕರು ಮತ್ತು ಅನುಭವಸ್ಥರು ವಿಷಯವನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಅದೀಗ ಮುಗಿದ ಅಧ್ಯಾಯ ಎಂದು ಮಲ್ಲಿಕಾರ್ಜುನ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ