ಕಾವೇರಿ ನಿವಾಸದ ಬಳಿ ಜನಜಂಗುಳಿ ನಿಯಂತ್ರಿಸದ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ರೇಗಿದ ಸಿಎಂ ಸಿದ್ದರಾಮಯ್ಯ
ಆಫ್ ಕೋರ್ಸ್ ಮುಖ್ಯಮಂತ್ರಿಗೆ ಕೆಲಸ ಒತ್ತಡ ಜಾಸ್ತಿ ಮತ್ತು ಪುರುಸೊತ್ತಿಲ್ಲದಷ್ಟು ಕೆಲಸಗಳಿರುತ್ತವೆ. ರಾಜ್ಯದ ಉಸ್ತುವಾರಿ ಅವರ ಮೇಲಿರುವುದರಿಂದ ಅದು ಸಹಜವೂ ಹೌದು. ಇವತ್ತು ಕಾವೇರಿ ನಿವಾಸದಿಂದ ಹೊರಬಿದ್ದ ಸಿದ್ದರಾಮಯ್ಯ ಜನಜಂಗುಳಿಯನ್ನು ನಿಯಂತ್ರಿಸದ ಪೊಲೀಸರ ಮೇಲೆ ರೇಗಾಡಿದರು.
ಬೆಂಗಳೂರು: ಸಾರ್ವಜನಿಕರು ಮುಖ್ಯಮಂತ್ರಿಯ ಬಳಿ ತಮ್ಮ ಕಷ್ಟ ಹೇಳಿಕೊಳ್ಳಲು ಬರೋದು ಒಂದು ಸಾಮಾನ್ಯ ಸಂಗತಿ, ಅದರಲ್ಲಿ ಹೊಸತೇನೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಾವೇರಿ ನಿವಾಸ (Cauvery Nivas) ಬಳಿಯಿರಲಿ ಅಥವಾ ಅಧಿಕೃತ ನಿವಾಸ ಕೃಷ್ಣಾ (official residence Krishna), ಹೊರಗಡೆ ಜನ ಅವರಿಗಾಗಿ ಕಾಯುತ್ತಿರುತ್ತಾರೆ. ಅವರು ಕಾಣಿಸಿದ ಕೂಡಲೇ ದೂರು ಹೇಳಿಕೊಳ್ಳಲು, ಮನವಿ ಸಲ್ಲಸಲು ಹತ್ತಿರಕ್ಕೆ ಓಡುತ್ತಾರೆ. ಸಿದ್ದರಾಮಯ್ಯ ಒಳ್ಳೇ ಮೂಡ್ ನಲ್ಲಿದ್ದರೆ ಅವರಿಗದು ಸಹ್ಯವೆನಿಸುತ್ತದೆ. ಆದರೆ ಮೂಡ್ ಸ್ವಲ್ಲ ಖರಾಬಾಗಿದ್ದರೆ ಕಿರಿಕಿರಿ ಅನಿಸುತ್ತದೆ. ಆಫ್ ಕೋರ್ಸ್ ಮುಖ್ಯಮಂತ್ರಿಗೆ ಕೆಲಸ ಒತ್ತಡ ಜಾಸ್ತಿ ಮತ್ತು ಪುರುಸೊತ್ತಿಲ್ಲದಷ್ಟು ಕೆಲಸಗಳಿರುತ್ತವೆ. ರಾಜ್ಯದ ಉಸ್ತುವಾರಿ ಅವರ ಮೇಲಿರುವುದರಿಂದ ಅದು ಸಹಜವೂ ಹೌದು. ಇವತ್ತು ಕಾವೇರಿ ನಿವಾಸದಿಂದ ಹೊರಬಿದ್ದ ಸಿದ್ದರಾಮಯ್ಯ ಜನಜಂಗುಳಿಯನ್ನು ನಿಯಂತ್ರಿಸದ ಪೊಲೀಸರ ಮೇಲೆ ರೇಗಾಡಿದರು. ಪಾಪ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹ್ಯಾಪು ಮೋರೆ ಹಾಕ್ಕೊಂಡು ಬೈಗುಳ ಕೇಳಿಸಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ