ಬರ್ತ್​ಡೇ ಬಾಯ್ ಅಶೋಕ ಖೇಣಿ ಡಿಸಿಎಂ ಶಿವಕುಮಾರ್​ರನ್ನು ಭೇಟಿಯಾಗಲು ಹೋದಾಗ ಸಿಕ್ಕಿದ್ದು ಕೆಜಿಎಫ್ ಬಾಬು!

ಬರ್ತ್​ಡೇ ಬಾಯ್ ಅಶೋಕ ಖೇಣಿ ಡಿಸಿಎಂ ಶಿವಕುಮಾರ್​ರನ್ನು ಭೇಟಿಯಾಗಲು ಹೋದಾಗ ಸಿಕ್ಕಿದ್ದು ಕೆಜಿಎಫ್ ಬಾಬು!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 05, 2023 | 2:41 PM

ಶಿವಕುಮಾರ್ ಹೋದ ಬಳಿಕ ಖೇಣಿ ಮತ್ತು ಇನ್ನೊಬ್ಬ ನೊಂದಜೀವಿ ಕೆಜಿಎಫ್ ಬಾಬು ಪರಸ್ಪರ ಎದುರಾಗುತ್ತಾರೆ. ಬಾಬು ಖೇಣಿಯವರ ಗುರುತು ಹಿಡಿದಿರುತ್ತಾರೆ ಆದರೆ ಖೇಣಿಗೆ ಬಾಬು ಬಗ್ಗೆ ಗೊತ್ತಿದೆಯೋ ಇಲ್ವೋ? ಮಾಧ್ಯಮದವರು ಬಾಬುಗೆ, ಖೇಣಿಯವರನ್ನು ವಿಶ್ ಮಾಡಿ ಇವತ್ತು ಅವರ ಹುಟ್ಟುಹಬ್ಬ ಅಂದಾಗ ಶುಭ ಹಾರೈಸುತ್ತಾ ತಬ್ಬಿಕೊಳ್ಳುತ್ತಾರೆ.

ಬೆಂಗಳೂರು: ಉದ್ಯಮಿ-ರಾಜಕಾರಣಿ ಅಶೋಕ ಖೇಣಿಗೆ (Ashok Kheny) ಇಂದು 74 ನೇ ಹುಟ್ಟುಹಬ್ಬ ಸಂಭ್ರಮ. ಇವತ್ತು ಮತ್ತೊಮ್ಮೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿವಾಸದ ಬಳಿ ಕಂಡರು. ಖೇಣಿ ಆಲ್ಲಿಗೆ ಹೋಗಿದ್ದನ್ನು ಇತ್ತೀಚಿಗಷ್ಟೇ ವರದಿ ಮಾಡಲಾಗಿತ್ತು. ಶಿವಕುಮಾರ್ ರನ್ನು ಯಾಕೆ ಭೇಟಿಯಾಗಬಯಸಿದ್ದಾರೆ ಅಥವಾ ಯಾಕೆ ಬೇಟಿಯಾಗುತ್ತಿದ್ದಾರೆ ಅಂತ ಗೊತ್ತಾಗಿಲ್ಲ. ಇಷ್ಟಕ್ಕೂ ಉಪ ಮುಖ್ಯಮಂತ್ರಿಗೆ ಜೊತೆ ಮಾತಾಡುವ ಸಂದರ್ಭ ಸಿಕ್ಕಿದೆ ಅಥವಾ ಸಿಕ್ಕಿಲ್ಲ ಅಂತಲೂ ಗೊತ್ತಿಲ್ಲ. ಬರ್ತ್ ಡೇ ಬಾಯ್ ಕಳೆದ ಬಾರಿ ಭೇಟಿಯಾಗಲು ಬಂದಾಗಲೂ ಅವಸರದಲ್ಲಿದ್ದ ಶಿವಕುಮಾರ್ ಕಾರು ಹತ್ತಿ ಹೊರಟು ಹೋಗಿದ್ದರು. ಇವತ್ತು ಉಪ ಮುಖ್ಯಮಂತ್ರಿ ನಿವಾಸದ ಬಳಿ ಜನಜಂಗುಳಿ ಜಾಸ್ತಿ ಇತ್ತು. ಅವರು ಕಾರಿನ ಬಳಿ ಬರುತ್ತಿದ್ದಂತೆಯೇ ಜನ ನಾ ಮುಂದು ತಾ ಮುಂದು ಅಂತ ಹಾರ ಹಾಕಿ ಶಾಲು ಹೊದಿಸಲಾರಂಭಿಸುತ್ತಾರೆ. ಖೇಣಿ ಎಲ್ಲೂ ಕೆಮೆರಾ ಫ್ರೇಮಲ್ಲಿ ಬರಲ್ಲ. ಶಿವಕುಮಾರ್ ಹೋದ ಬಳಿಕ ಖೇಣಿ ಮತ್ತು ಇನ್ನೊಬ್ಬ ನೊಂದಜೀವಿ ಕೆಜಿಎಫ್ ಬಾಬು (KGF Babu) ಪರಸ್ಪರ ಎದುರಾಗುತ್ತಾರೆ. ಬಾಬು ಖೇಣಿಯವರ ಗುರುತು ಹಿಡಿದಿರುತ್ತಾರೆ ಆದರೆ ಖೇಣಿಗೆ ಬಾಬು ಬಗ್ಗೆ ಗೊತ್ತಿದೆಯೋ ಇಲ್ವೋ? ಮಾಧ್ಯಮದವರು ಬಾಬುಗೆ, ಖೇಣಿಯವರನ್ನು ವಿಶ್ ಮಾಡಿ ಇವತ್ತು ಅವರ ಹುಟ್ಟುಹಬ್ಬ ಅಂದಾಗ ಶುಭ ಹಾರೈಸುತ್ತಾ ತಬ್ಬಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ