ಡಿಕೆ ಶಿವಕುಮಾರ್​ರನ್ನು ಕಾಣಲು ಬಂದ ಕಾಂಗ್ರೆಸ್ ನಾಯಕ ಅಶೋಕ ಖೇಣಿಗೆ ಅವರೊಂದಿಗೆ ಮಾತಾಡುವುದು ಸಾಧ್ಯವಾಗಲಿಲ್ಲ!

ಡಿಕೆ ಶಿವಕುಮಾರ್​ರನ್ನು ಕಾಣಲು ಬಂದ ಕಾಂಗ್ರೆಸ್ ನಾಯಕ ಅಶೋಕ ಖೇಣಿಗೆ ಅವರೊಂದಿಗೆ ಮಾತಾಡುವುದು ಸಾಧ್ಯವಾಗಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 19, 2023 | 7:43 PM

ಶಿವಕುಮಾರ ಕಾರಲ್ಲಿ ಕೂರುತ್ತಿದ್ದಂತೆಯೇ ಅಲ್ಲಿಂದ ಹೊರಟ ಖೇಣಿ, ಅಲ್ಲಿ ನಿಂತಿದ್ದ ಕೆಲ ಜನರ ಬಳಿ ತಾವೇ ಹೋಗಿ ಮಾತಾಡಿದರು. ಏನ್ಸಾರ್, ಡಿಸಿಎಂ ಅವರನ್ನು ಕಾಣಲು ಬಂದಿದ್ದೀರಲ್ಲ, ಏನು ಕಾರಂ ಅಂತ ಮಾಧ್ಯಮದವರು ಕೇಳಿದರೆ, ಏನಿಲ್ಲ ನೀವು ಇಲ್ಲಿ ಸಿಗ್ತೀರಾ ಅಂತ ಬಂದೆ ಅಂತ ಹೇಳಿ ನಗುತ್ತಾ ಹೊರಟರು.

ಬೆಂಗಳೂರು:  ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್​ಪ್ರೈಸಸ್ (ನೈಸ್ ರೋಡ್) (NICE Corridor) ಕಾಮಗಾರಿ ಜಾರಿಯಲ್ಲಿದ್ದಾಗ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (MD) ಅಶೋಕ ಖೇಣಿಯವರೊಂದಿಗೆ (Ashok Kheny) ದೂರದಿಂದಲೂ ಮಾತಾಡುವುದು ಅಸಾಧ್ಯವಾಗಿತ್ತು. ಅದರೆ ಈಗ ಅವರೇ ಹತ್ತಿರ ಬಂದು ನಿಂತರೂ ಅವರೊಂದಿಗೆ ಮಾತಾಡುವವರು ಯಾರೂ ಇಲ್ಲ! ಖೇಣಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ ಡಿಸಿಎಂ ದೆಹಲಿಗೆ ಹೊರಡುವ ತರಾತುರಿಯಲ್ಲಿದ್ದರು. ಇಬ್ಬರ ನಡುವೆ ಮಾತುಕತೆ ಪ್ರಾಯಶಃ ಸಾಧ್ಯವಾಗಲಿಲ್ಲ. ಶಿವಕುಮಾರ ಕಾರಲ್ಲಿ ಕೂರುತ್ತಿದ್ದಂತೆಯೇ ಅಲ್ಲಿಂದ ಹೊರಟ ಖೇಣಿ, ಅಲ್ಲಿ ನಿಂತಿದ್ದ ಕೆಲ ಜನರ ಬಳಿ ತಾವೇ ಹೋಗಿ ಮಾತಾಡಿದರು. ಏನ್ಸಾರ್, ಡಿಸಿಎಂ ಅವರನ್ನು ಕಾಣಲು ಬಂದಿದ್ದೀರಲ್ಲ, ಏನು ಕಾರಂ ಅಂತ ಮಾಧ್ಯಮದವರು ಕೇಳಿದರೆ, ಏನಿಲ್ಲ ನೀವು ಇಲ್ಲಿ ಸಿಗ್ತೀರಾ ಅಂತ ಬಂದೆ ಅಂತ ಹೇಳಿ ನಗುತ್ತಾ ಹೊರಟರು. ಅವರಿಗೆ ಮುಪ್ಪಡರಿದೆ. ಕಿವಿ ಸರಿಯಾಗಿ ಕೇಳಿಸುತ್ತಿಲ್ಲ, ನಡಿಗೆಯಲ್ಲಿ ದೃಢತೆ, ಆತ್ಮವಿಶ್ವಾಸವಿಲ್ಲ. ನಿರಾಶೆಯ ಭಾವದಲ್ಲೇ ಅವರು ಕಾರು ಹತ್ತಿ ಶಿವಕುಮಾರ್ ಮನೆಯಿಂದ ನಿರ್ಗಮಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ