ತಮಿಳುನಾಡುಗೆ ನೀರು ಬಿಡದಿದ್ದರೆ ಏನಾಗುತ್ತದೆ ಅಂತ ಹೇಳಿ ವಿವಾದ ಸೃಷ್ಟಿಸುವುದು ಬೇಡ; ಎನ್ ಚಲುವರಾಯಸ್ವಾಮಿ, ಕೃಷಿ ಸಚಿವ

ತಮಿಳುನಾಡುಗೆ ನೀರು ಬಿಡದಿದ್ದರೆ ಏನಾಗುತ್ತದೆ ಅಂತ ಹೇಳಿ ವಿವಾದ ಸೃಷ್ಟಿಸುವುದು ಬೇಡ; ಎನ್ ಚಲುವರಾಯಸ್ವಾಮಿ, ಕೃಷಿ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 19, 2023 | 7:02 PM

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಬೆಂಬಲದ ಬಗ್ಗೆಯೂ ಮಾತಾಡಿದ ಚಲುವರಾಯಸ್ವಾಮಿ, ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಭಾರೀ ಯಶ ಕಂಡಿದೆ ಮತ್ತು ಹೈದರಾಬಾದ್ ನಲ್ಲಿ ನಡೆದ ಱಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಹೇಳಿದರು.

ಮಂಡ್ಯ: ಕಾವೇರಿ ನದಿ ನೀರು ಸಮಸ್ಯೆಗೆ ಸಂಬಂಧಿಸಿದಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ತಮಿಳುನಾಡುಗೆ ಕರ್ನಾಟಕ ನೀರು ಬಿಡದಿದ್ದರೆ ಏನಾಗುತ್ತದೆ ಅಂತ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ನೀಎಉ ಬಿಡಲ್ಲ ಅಂತ ಮಾತಾಡಿ ವಿವಾದ (controversy) ಸೃಷ್ಟಿಸುವುದು ಬೇಡ, ಕಾವೇರಿ ನೀರಂತೂ ತನ್ನ ಪಾಡಿಗೆ ತಾನು ತಮಿಳುನಾಡುಗೆ ಹರಿದು ಹೋಗುತ್ತಿದೆ. ಸೀಪೇಜ್ ನೀರು ಹೋಗುತ್ತಿದೆ ಮತ್ತು ಮಳೆಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದಿಂದಲೂ ನೀರು ಹೋಗುತ್ತಿದೆ ಎಂದು ಸಚಿವರ ಹೇಳಿದರು. ತೆಲಂಗಾಣದಲ್ಲಿ (Telangana) ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಬೆಂಬಲದ ಬಗ್ಗೆಯೂ ಮಾತಾಡಿದ ಚಲುವರಾಯಸ್ವಾಮಿ, ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಭಾರೀ ಯಶ ಕಂಡಿದೆ ಮತ್ತು ಹೈದರಾಬಾದ್ ನಲ್ಲಿ ನಡೆದ ಱಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಹೇಳಿದರು. ತೆಲಂಗಾಣದಲ್ಲಿ ತಮ್ಮ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಹೇಳಿದ ಅವರು ದೇಶದೆಲ್ಲೆಡೆ ಕಾಂಗ್ರೆಸ್ ಅಲೆ ಶುರುವಾಗಿದೆ ಅಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ