ದುನಿಯಾ ವಿಜಯ್ ಪುತ್ರ ಸಿನಿಮಾಕ್ಕೆ ಎಂಟ್ರಿ: 'ಭೀಮ' ಸಿನಿಮಾದಲ್ಲಿ ಸಾಮ್ರಾಟ್ ಪಾತ್ರವೇನು?

ದುನಿಯಾ ವಿಜಯ್ ಪುತ್ರ ಸಿನಿಮಾಕ್ಕೆ ಎಂಟ್ರಿ: ‘ಭೀಮ’ ಸಿನಿಮಾದಲ್ಲಿ ಸಾಮ್ರಾಟ್ ಪಾತ್ರವೇನು?

ಮಂಜುನಾಥ ಸಿ.
|

Updated on:Sep 19, 2023 | 10:50 PM

Duniya Vijay: ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದಿರುವ ನಟ ದುನಿಯಾ ವಿಜಯ್, ಇದೀಗ ತಮ್ಮ ಮಗನನ್ನೂ ಚಿತ್ರರಂಗದಲ್ಲಿ ನೆಲೆ ನಿಲ್ಲಿಸುವ ಪ್ರಯತ್ನ ಆರಂಭಿಸಿದಂತಿದೆ. 'ಭೀಮ' ಸಿನಿಮಾದಲ್ಲಿ ದುನಿಯಾ ವಿಜಯ್ ಪುತ್ರ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಬಗ್ಗೆ ಸ್ವತಃ ದುನಿಯಾ ವಿಜಯ್ ಮಾತನಾಡಿದ್ದಾರೆ.

ದುನಿಯಾ ವಿಜಯ್ (Duniya Vijay) ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಹಾಡು ಇದೀಗ ಬಿಡುಗಡೆ ಆಗಿದೆ. ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದಿರುವ ದುನಿಯಾ ವಿಜಯ್, ತಮ್ಮ ಪುತ್ರ ಸಾಮ್ರಾಟ್ ಅನ್ನೂ ಸಹ ಚಿತ್ರರಂಗದಲ್ಲಿಯೇ ಬೆಳೆಸುವ ಯೋಜನೆಯಲ್ಲಿದ್ದಾರೆ. ಅದರಂತೆ ಸಾಮ್ರಾಟ್ ಸಹ ಚಿತ್ರರಂಗದಲ್ಲಿ ‘ಭೀಮ’ ಸಿನಿಮಾ ಮೂಲಕ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಾಮ್ರಾಟ್ ‘ಭೀಮ’ ಸಿನಿಮಾನಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತಂದೆಗೆ ಹಲವು ಉಪಯುಕ್ತ ಸಲಹೆಗಳನ್ನೂ ನೀಡಿದ್ದಾರೆ. ‘ಭೀಮ’ ಸಿನಿಮಾದಲ್ಲಿ ಮಗನ ತೊಡಗಿಕೊಳ್ಳುವಿಕೆ ಬಗ್ಗೆ ದುನಿಯಾ ವಿಜಯ್ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 19, 2023 10:48 PM