ಶಾಮನೂರು ಶಿವಶಂಕರಪ್ಪ ಜಾತಿ ವಿಚಾರ ಮಾತನಾಡಿದ್ದು ತಪ್ಪು: ಬಸವರಾಜ ರಾಯರೆಡ್ಡಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಶಾಸಕ ಮತ್ತು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸ್ವಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪ ಜಾತಿ ವಿಚಾರ ಮಾತನಾಡಿದ್ದು ತಪ್ಪು ಎಂದಿದ್ದಾರೆ.

ಶಾಮನೂರು ಶಿವಶಂಕರಪ್ಪ ಜಾತಿ ವಿಚಾರ ಮಾತನಾಡಿದ್ದು ತಪ್ಪು: ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ ಮತ್ತು ಶಾಮನೂರು ಶಿವಶಂಕರಪ್ಪ
Follow us
TV9 Web
| Updated By: Rakesh Nayak Manchi

Updated on: Oct 03, 2023 | 2:45 PM

ಬೆಂಗಳೂರು, ಅ.3: ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಜಾತಿ ವಿಚಾರ ಮಾತನಾಡಿದ್ದು ತಪ್ಪು ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಜಾತಿ ಆಧಾರದಲ್ಲಿ ಮಂತ್ರಿ ಮಾಡಿ ಅಂತಾ ಕೇಳುವುದಿಲ್ಲ. ಅನರ್ಹರೆಲ್ಲ ನಾಳೆ ಜಾತಿ ಆಧರಿಸಿ ಬಂದು ಕೂರುತ್ತಾರೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರು ಉತ್ತರ ಕೊಡುತ್ತಾರೋ ಬಿಡುತ್ತಾರೋ ಅದು ಅವರಿಗೆ ಬಿಟ್ಟದ್ದು. ಆದರೆ ಯಾವುದೇ ಸಮುದಾಯದವರು ಹೀಗೆ ಮಾತನಾಡಬಾರದೆಂದು ಬಯಸ್ತೇನೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಶಾಸಕ ಮತ್ತು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸ್ವಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದು ನಾಲ್ಕು ತಿಂಗಳಾಯಿತು. ಹಲವಾರು ಜನಪರ ಕಾರ್ಯಕ್ರಮ ಸರ್ಕಾರ ಕೊಟ್ಟಿದೆ. ಪ್ರಾರಂಭಧ ಹಂತದಲ್ಲಿ ಸ್ವಲ್ಪ ಕೋಆರ್ಡಿನೇಷನ್ ಕಡಿಮೆ ಇತ್ತು ಅಂತ ನಾವೆಲ್ಲ ಹೇಳಿದ್ದೆವು. ಇದೀಗ ಶಾಸಕರ ಕೆಲಸಗಳೆಲ್ಲ ಆಗುತ್ತಿವೆ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರು.

ಸದ್ಯ ರಾಜ್ಯದಲ್ಲಿ ಡಿಸಿಎಂ ಸೇರಿದಂತೆ ಹಲವು ವಿಚಾರಗಳೂ ಚರ್ಚೆಗೆ ಬರುತ್ತಿವೆ. ಇದೀಗ ಮತ್ತೆ ಲಿಂಗಾಯತರಿಗೆ ಅವಕಾಶ ಇಲ್ಲ ಅನ್ನುವ ಮಾತನ್ನು ಹೇಳುತ್ತಿದ್ದಾರೆ. ವಿಪಕ್ಷಗಳೂ ಕೂಡ ಈ ಬಗ್ಗೆ ಮಾತನಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯರು, ಅವರ ಮೇಲೆ ಗೌರವ ಇದೆ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನ ಮಾನ ಇಲ್ಲ ಅಂತ ಶಾಮನೂರು ಹೇಳಿದ್ದಾರೆ. ಜಾತಿ ಆಧಾರದ ಮೇಲೆ ನಾವು ಪೋಸ್ಟಿಂಗ್ ಕೊಡಲು ಆಗಲ್ಲ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ: ಈ ಸಂಬಂಧ ನಾನು ನೀಡಿರುವ ಹೇಳಿಕೆಗೆ ಬದ್ಧ: ಶಾಸಕ ಶಾಮನೂರು

ಮಂತ್ರಿಮಂಡಲ ಮಾಡುವ ಕಾಲದಲ್ಲಿ ಸಾಮಾಜಿಕ ನ್ಯಾಯ ಸಿಗಬೇಕು ಅಂತ ಜಾತಿ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಮಂತ್ರಿ ಮಾಡಬೇಕು ಎಂಬುದಕ್ಕೆ ಯಾವುದೇ ಮಾನದಂಡ ಇಲ್ಲ. ಆದರೆ ಅಧಿಕಾರಿಗಳಿಗೆ ಮಾನದಂಡ ಇದೆ. ನಾಳೆ ಯಾರು ಬೇಕಾದರೂ ಪ್ರಧಾನಿ ಆಗಬಹುದು. ಆದರೆ ಯಾರು ಬೇಕಾದರೂ ಅಟೆಂಡರ್ ಆಗುವುದಕ್ಕೆ ಸಾಧ್ಯ ಇಲ್ಲ. ಮಂತ್ರಿಮಂಡಲ ಸಿಎಂಗೆ ಬಿಟ್ಟ ವಿಚಾರ ಎಂದರು.

ಸಿದ್ದರಾಮಯ್ಯ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ನಾನು ಒಪ್ಪಲ್ಲ ಎಂದ ರಾಯರೆಡ್ಡಿ, ಸಿದ್ದರಾಮಯ್ಯ ಅವರು ಬಸವ ತತ್ವ ಪಾಲನೆ ಮಾಡುವವರು. ಬಸವೇಶ್ವರರ ಫೋಟೋ ಹಾಕುವಂತೆ ಕಡ್ಡಾಯ ಮಾಡಿದವರು. ಹಿಂದೆ ಮುಖ್ಯಮಂತ್ರಿ ಆದವರು ಯಾಕೆ ಈ ಆದೇಶ ಮಾಡಿರಲಿಲ್ಲ? ಅಕ್ಕಮಹಾದೇವಿ ಯುನಿವರ್ಸಿಟಿ ಅಂತ ಹೆಸರಿಟ್ಟಿದ್ದು ನಮ್ಮ ಸರ್ಕಾರ. ಬಸವೇಶ್ವರ ವಿಶ್ವವಿದ್ಯಾಲಯ ಅಂತ ಹಿಂದಿನ ಬಿಜೆಪಿ ಸರ್ಕಾರ ಯಾವುದಕ್ಕೂ ಹೆಸರಿಡಲಿಲ್ಲ ಎಂದರು.

ಜಾತಿ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಲಿಂಗಾಯತ ವಿರೋಧಿ ಆಗಿದ್ದರೆ ಈ ಎಲ್ಲಾ ಕೆಲಸಗಳು ಆಗುತ್ತಿರಲಿಲ್ಲ. ಸಿದ್ದರಾಮಯ್ಯ ಎಲ್ಲ ಜಾತಿಗಳ ಪರವಾಗಿದ್ದಾರೆ. ಲಿಂಗಾಯತ ಸಮಯದಾಯ ಪ್ರಬಲ ಸಮುದಾಯ. ಶೋಷಿತರ ಪರವಾಗಿ ಸಿದ್ದರಾಮಯ್ಯ ಇರಬಹುದು. ಆದರೆ ಲಿಂಗಾಯತ ವಿರೋಧಿ ಅಲ್ಲ ಎಂದರು.

ಮೂವರು ಡಿಸಿಗಳು ಲಿಂಗಾಯತರಿದ್ದಾರೆ. ಬೆಳಗಾವಿ ಡಿಸಿ ನಿತೇಶ್ ಪಾಟೀಲ್, ವಿಜಯನಗರ ಡಿಸಿ ದಿವಾಕರ್ ಲಿಂಗಾಯತ, ದಾವಣಗೆರೆಯಲ್ಲಿ ಜಿಪಂ ಸಿಇಓ ಲಿಂಗಾಯತ ಸಮುದಾಯದವರು ಎಂದು ಹೇಳಿದ ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪ ಅವರಿಗೆ ಮಾಹಿತಿ ಕೊರತೆ ಇದೆ ಎಂದರು.

ಇದನ್ನೂ ಓದಿ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ, ಹೆಚ್. ವಿಶ್ವನಾಥ್​ಗೆ ಹುಚ್ಚಾಸ್ಪತ್ರೆಗೆ ಕಳುಹಿಸಿ -ಶಾಸಕ ಶಾಮನೂರು

ಜಾತಿ ಆಧಾರದ ಮೇಲೆ ಅಧಿಕಾರಿಗಳ ನೇಮಕ ಮಾಡುವುದೇ ತಪ್ಪು. ಅಧಿಕಾರಿಗಳ ಜಾತಿ ವಿವರ ನಮ್ಮ ಬಳಿ ಇದೆ. ಇದು ಸರ್ಕಾರದ ಬಳಿಯೇ ಇರುವ ಮಾಹಿತಿ. ನಾಳೆ ಒಕ್ಕಲಿಗ ಮಾತನಾಡುತ್ತಾರೆ, ಬೇರೆಯವರೂ ಮಾತನಾಡುತ್ತಾರೆ. ಜಾತಿ ಆಧಾರದ ಮೇಲೆ ನಾಳೆ ಅಧಿಕಾರಿಗಳು ಮಾತನಾಡಲು ಶುರು ಮಾಡಿದರೆ ಅದರ ಪರಿಣಾಮ ಆಡಳಿತದ ಮೇಲಾಗುತ್ತದೆ ಎಂದರು.

ಜಾತಿ ವ್ಯವಸ್ಥೆ ಇರಬಾರದು, ಆದರೆ ಇದೆ. ಒಟ್ಟೂ 7 ಎಸ್​ಪಿಗಳು ಲಿಂಗಾಯತ ಸಮುದಾಯದವರಾಗಿದ್ದಾರೆ. ಮೂವರು ಜಿಲ್ಲಾಧಿಕಾರಿಗಳು ಕೂಡ ಇದೇ ಸಮುದಾಯದವರು. ಇಲಾಕೆಯಲ್ಲಿ 13 ಜನ ಕುಲಪತಿಗಳು ಲಿಂಗಾಯತ ಸಮುದಾಯವರಾಗಿದ್ದಾರೆ. ದಾವಣಗೆರೆಯಲ್ಲಿ ಒಕ್ಕಲಿಗ ಡಿಸಿ ಇದ್ದಾರೆ, ಬೇಕಿದ್ದರೆ ಲಿಂಗಾಯತ ಡಿಸಿಯನ್ನೇ ಹಾಕಿಕೊಳ್ಳಿ. ಜಾತಿ ಆಧಾರದಲ್ಲಿ ಮಾತನಾಡಿದರೆ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಜಾತಿ ಜನಗಣತಿ ಅಂಗೀಕಾರಕ್ಕೆ ಒತ್ತಾಯ

ಜಾತಿ ಗಣತಿ ಆಗಬೇಕು ಅಂತ 2015 ರಲ್ಲಿಯೇ ಮಾಡಲಾಗಿತ್ತು. ಇದುವರೆಗೆ ಸರ್ಕಾರ ಒಪ್ಪಿಲ್ಲ. ಸರ್ಕಾರ ಇದನ್ನು ಒಪ್ಪಿಕೊಳ್ಳಬೇಕು. ಸುಮ್ಮ ಸುಮ್ಮನೆ ಆ ಜಾತಿ ಅಷ್ಟಿದೆ ಈ ಜಾತಿ ಇಷ್ಟಿದೆ ಹೇಳುವುದು ಯಾಕೆ? ಜಾತಿ ಜನಗಣತಿಯನ್ನು ಸರ್ಕಾರ ಅಂಗೀಕಾರ ಮಾಡಲಿ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಜೀವಂತ ಇರುತ್ತದೆಯೋ ಅಲ್ಲಿ ತನಕ ಸಾಮಾಜಿಕ ಶೈಕ್ಷಣಿಕ ಶೋಷಣೆ ಆಗುತ್ತದೆ ಎಂದರು.

ಬೇರೆಯವರ ವೈಯಕ್ತಿಕ ಅಭಿಪ್ರಾಯಕ್ಕೆ ನಾನು ಉತ್ತರ ಕೊಡಲು ಆಗಲ್ಲ. ಈ ಗಣತಿಗೆ ಸುಮಾರು 160 ಕೋಟಿ ಖರ್ಚಾಗಿದೆ. ತ್ವರಿತವಾಗಿ ಸರ್ಕಾರ ಇದನ್ನು ಬಿಡುಗಡೆ ಮಾಡಲಿ ಅಂತ ಒತ್ತಾಯ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ಸರ್ಕಾರ ಈ ಹಿಂದೆಯೇ ಜಾತಿ ಗಣತಿ ಆಗಬೇಕು ಅಂತ ಮಾಡಿತ್ತು. ಬಿಹಾರ ಸರ್ಕಾರ ನಿನ್ನೆ ಜಾತಿ ಗಣತಿ ವರದಿ ಬಿಡುಗಡೆ ಮಾಡಿದೆ. ನಮ್ಮ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ. ಜಾತಿಗಣತಿಯಿಂದ ಸಾಕಷ್ಟು ವರ್ಗದವರಿಗೆ ಸಹಾಯವಾಗಲಿದೆ. ಜಯಪ್ರಕಾಶ್ ಹೆಗಡೆ ಅವರು ಸರ್ಕಾರಕ್ಕೆ ವರದಿ ಕೊಡಲಿ ಎಂದರು.

ಮಹತ್ವ ಕಳೆದುಕೊಂಡ ಡಿಸಿಎಂ ಸ್ಥಾನ

ಉಪ ಮುಖ್ಯಮಂತ್ರಿ ಸ್ಥಾನ ಯಾವುದೇ ಸಾಂವಿಧಾನಿಕ ಹುದ್ದೆ ಅಲ್ಲ ಎಂದು ಹೇಳಿದ ರಾಯರೆಡ್ಡಿ, ಆ ಹುದ್ದೆಯ ಮಹತ್ವ ಈಗಾಗಲೇ ಕಳೆದುಕೊಂಡಿದೆ. ಆಂಧ್ರಪ್ರದೇಶದಲ್ಲಿ ಐವರು ಡಿಸಿಎಂ ಇದ್ದಾರೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮೂವರು ಡಿಸಿಎಂ ಇದ್ದರು. ಹೀಗಾಗಿ ಆಗುವುದಾದರೆ 5-6 ಡಿಸಿಎಂ ಮಾಡಿ ಅಂತ ನಾನು ಹೇಳಿದ್ದೇನೆ. ಡಿಸಿಎಂ ಜತೆಗೆ ಪ್ರಿನ್ಸಿಪಲ್ ಡಿಸಿಎಂ ಅಂತಲೂ ಮಾಡಿಬಿಟ್ಟರೆ ಆಗೋಯ್ತು ಎಂದು ವ್ಯಂಗ್ಯವಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ