ಪೊಲೀಸ್ ಠಾಣೆ ಎದುರು ಟೆಂಟ್ ಹಾಕಿ, ಜನರ ಶೂಗಳನ್ನು ಪಾಲಿಶ್ ಮಾಡಿದ ಪಕ್ಷೇತರ ಶಾಸಕ ಓಂ ಪ್ರಕಾಶ್ ಹುಡ್ಲಾ
ರಾಜಸ್ಥಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರ ನಡವಳಿಕೆ ಬದಲಾಗಿದೆ. ಪಕ್ಷೇತರ ಶಾಸಕ ಓಂ ಪ್ರಕಾಶ್ ಹುಡ್ಲಾ ಅವರು ದೌಸಾದ ಮಾಹ್ವಾದಲ್ಲಿ ಪ್ರಚಾರ ಮಾಡುವಾಗ ಜನರ ಬೂಟುಗಳನ್ನು ಪಾಲಿಶ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಾಹಿತಿ ಪ್ರಕಾರ, ಹುಡ್ಲಾ ಹತ್ತಾರು ಜನರ ಶೂಗಳಿಗೆ ಪಾಲಿಶ್ ಮಾಡಿ ಹೊಳಪು ಕೊಡಲು ಯತ್ನಿಸಿದ್ದಾನೆ. ಇತರರಿಗೆ ಸುದ್ದಿ ತಿಳಿದ ತಕ್ಷಣ, ಜನರು ತಮ್ಮ ಶೂಗಳಿಗೆ ಪಾಲಿಶ್ ಮಾಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಸುಮಾರು ಒಂದು ಗಂಟೆ ಕಾಲ ಶಾಸಕರು ತಮ್ಮ ಬೆಂಬಲಿಗರ ಶೂಗಳನ್ನು ಒಂದೊಂದಾಗಿ ಪಾಲಿಶ್ ಮಾಡುತ್ತಲೇ ಇದ್ದರು.
ರಾಜಸ್ಥಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರ ನಡವಳಿಕೆ ಬದಲಾಗಿದೆ. ಪಕ್ಷೇತರ ಶಾಸಕ ಓಂ ಪ್ರಕಾಶ್ ಹುಡ್ಲಾ(Om Prakash Hudla) ಅವರು ದೌಸಾದ ಮಾಹ್ವಾದಲ್ಲಿ ಪ್ರಚಾರ ಮಾಡುವಾಗ ಜನರ ಬೂಟುಗಳನ್ನು ಪಾಲಿಶ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಾಹಿತಿ ಪ್ರಕಾರ, ಹುಡ್ಲಾ ಹತ್ತಾರು ಜನರ ಶೂಗಳಿಗೆ ಪಾಲಿಶ್ ಮಾಡಿ ಹೊಳಪು ಕೊಡಲು ಯತ್ನಿಸಿದ್ದಾನೆ. ಇತರರಿಗೆ ಸುದ್ದಿ ತಿಳಿದ ತಕ್ಷಣ, ಜನರು ತಮ್ಮ ಶೂಗಳಿಗೆ ಪಾಲಿಶ್ ಮಾಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಸುಮಾರು ಒಂದು ಗಂಟೆ ಕಾಲ ಶಾಸಕರು ತಮ್ಮ ಬೆಂಬಲಿಗರ ಶೂಗಳನ್ನು ಒಂದೊಂದಾಗಿ ಪಾಲಿಶ್ ಮಾಡುತ್ತಲೇ ಇದ್ದರು.
ಹುಡ್ಲಾ ಅವರು ಚುನಾವಣಾ ಉತ್ಸಾಹದ ನಡುವೆ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಇಲ್ಲಿಗೆ ತಲುಪಿದ ನಂತರ ಅವರು ಇದ್ದಕ್ಕಿದ್ದಂತೆ ತಮ್ಮ ಬೆಂಬಲಿಗರ ಶೂಗಳನ್ನು ಪಾಲಿಶ್ ಮಾಡಲು ಶುರು ಮಾಡಿದರು. ಹುಡ್ಲಾ ಅವರು ಬಿಜೆಪಿಯ ಮಾಜಿ ನಾಯಕರಾಗಿದ್ದಾರೆ, 2018ರ ಚುನಾವಣೆಗೂ ಮುನ್ನ, ಪಕ್ಷವು ಟಿಕೆಟ್ ಕೊಡಲು ನಿರಾಕರಿಸಿದಾಗ ಹುಡ್ಲಾ ರಾಜೀನಾಮೆ ನೀಡಿದರು.
ಇದಾದ ಬಳಿಕ ಪಕ್ಷೇತರರಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸಿದರು, 2013ರ ವಿಧಾನಸಭಾ ಚುನಾವಣೆಯಲ್ಲಿ ಕಿರೋರಿ ಲಾಲ್ ಮೀನಾ ಅವರ ಪತ್ನಿ ಗೋಲ್ಮಾ ದೇವಿ ಅವರನ್ನು ಸುಮಾರು 16 ಸಾವಿರ ಮತಗಳಿಂದ ಸೋಲಿಸಿ ಹುಡ್ಲಾ ಗೆಲುವು ಸಾಧಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಹುಡ್ಲ ಮತ್ತು ಅಬಕಾರಿ ನಿರೀಕ್ಷಕರ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದಾಗ ಬೆಳಕಿಗೆ ಬಂದಿತ್ತು. ಆಡಿಯೋದಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು, ಆದರೆ, ನಂತರ ಸರ್ಕಾರವು ಅಬಕಾರಿ ನಿರೀಕ್ಷಕರನ್ನು ಉದಯಪುರಕ್ಕೆ ವರ್ಗಾಯಿಸಿತು.
ಮತ್ತಷ್ಟು ಓದಿ: Rajasthan Politics: ಈ ಬಾರಿ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಮುರಿಯಲಿದೆ 30 ವರ್ಷಗಳ ದಾಖಲೆ: ಸಚಿನ್ ಪೈಲಟ್
2018ರಲ್ಲಿ ಗೆಲುವು ಸಾಧಿಸಿದ್ದ ಓಂ ಪ್ರಕಾಶ್ ಆಗ ಕೂಡ ಜನರ ಶೂಗಳನ್ನು ಪಾಲಿಶ್ ಮಾಡಿದ್ದರು, ಬಿಜೆಪಿಯ ರಾಜೇಂದ್ರ ಮೀಣಾ ಅವರನ್ನು 9,985 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇವರು. ಇಂದು ಪ್ರಜೆಗಳು ನನ್ನ ಮೇಲೆ ನಂಬಿಕೆ ಇರಿಸಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಶೂ ಪಾಲಿಶ್ ಮಾಡುವದರಿಂದ ನಾನು ಅವರಲ್ಲೊಬ್ಬ ಎಂಬ ಭಾವನೆ ಬರುತ್ತೆ ಎಂದು ಹೇಳಿದ್ದರು, ಇದೀಗ ಮತ್ತೆ ಚುನಾವಣಾ ಹೊಸ್ತಿಲಲ್ಲಿ ಜನರ ಶೂ ಪಾಲಿಶ್ ಮಾಡುವ ಮೂಲಕ ಜನರ ಮೆಚ್ಚುಗೆಗಳಿಸಲು ಪ್ರಯತ್ನಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ