Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​​ಡಿಎ ಮೈತ್ರಿಯಿಂದ ಎಐಎಡಿಎಂಕೆ ಹೊರಬಂದಿದ್ದು ಪಕ್ಷದ ಎರಡು ಕೋಟಿ ಕಾರ್ಯಕರ್ತರ ನಿರ್ಧಾರವಾಗಿತ್ತು: ಇಪಿಎಸ್

Edappadi K Palaniswami: ನಾವು ತಮಿಳುನಾಡಿನ ಜನರ ಮತದಿಂದ ಗೆದ್ದಿದ್ದೇವೆ, ಸಂಸತ್​​​ನಲ್ಲಿ ನಾವು ಅವರ ಧ್ವನಿಯಾಗುತ್ತೇವೆ, ಇದು ನಮ್ಮ ಸಿದ್ಧಾಂತವಾಗಿದೆ.  ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಯಾವುದೇ ಸಮಸ್ಯೆ ಎದುರಿಸಿದರೆ, ಎಐಎಡಿಎಂಕೆ ಧ್ವನಿ ನೀಡುವ ಪಕ್ಷವಾಗಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಎನ್​​ಡಿಎ ಮೈತ್ರಿಯಿಂದ ಎಐಎಡಿಎಂಕೆ ಹೊರಬಂದಿದ್ದು ಪಕ್ಷದ ಎರಡು ಕೋಟಿ ಕಾರ್ಯಕರ್ತರ ನಿರ್ಧಾರವಾಗಿತ್ತು: ಇಪಿಎಸ್
ಎಡಪ್ಪಾಡಿ ಕೆ ಪಳನಿಸ್ವಾಮಿ
Follow us
ರಶ್ಮಿ ಕಲ್ಲಕಟ್ಟ
|

Updated on: Oct 03, 2023 | 3:13 PM

ಚೆನ್ನೈ ಅಕ್ಟೋಬರ್ 03: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಬಿಜೆಪಿಯೊಂದಿಗಿನ (BJP) ಮೈತ್ರಿ ಮುರಿದುಕೊಂಡ ನಂತರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ (Edappadi K Palaniswami) ಈ ನಿರ್ಧಾರ ಅಂತಿಮ. ಇದು ನನ್ನೊಬ್ಬನದ್ದೇ ನಿರ್ಧಾರವಲ್ಲ, ಪಕ್ಷದ ಎರಡು ಕೋಟಿ ಕಾರ್ಯಕರ್ತರದ್ದು ಎಂದು ಹೇಳಿದ್ದಾರೆ. ಸೋಮವಾರ ರಾತ್ರಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ, “ಎರಡು ಕೋಟಿ ಪಕ್ಷದ ಕಾರ್ಯಕರ್ತರು ಸಮಾಲೋಚನಾ ಸಭೆಯಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಅದರ ಆಧಾರದ ಮೇಲೆ ಎಐಎಡಿಎಂಕೆ ಎನ್ ಡಿಎಯಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಂಡಿತು ಎಂದು ಹೇಳಿದ್ದಾರೆ.

“ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇದು ನನ್ನದೇ ಆದ ನಿರ್ಧಾರವಲ್ಲ. ಇದು ಎಐಎಡಿಎಂಕೆ ಕಾರ್ಯಕರ್ತರ ನಿರ್ಧಾರ. ನಿರ್ಣಯವನ್ನು ಅಂಗೀಕರಿಸಿದಾಗ ಅದು ಅಂತಿಮವೇ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅಂದಹಾಗೆ ವಿಭಜನೆಗೆ ಕಾರಣವೇನು ಎಂಬುದರ ಕುರಿತು ವಿವರಿಸಿದ ಮಾಜಿ ಮುಖ್ಯಮಂತ್ರಿ, “ಮೈತ್ರಿ ಧರ್ಮದ ಕಾರಣ ನಾವು ಒಪ್ಪದ ವಿಷಯಗಳನ್ನು ಬೆಂಬಲಿಸಲು ನಾವು ಒತ್ತಾಯಿಸಲ್ಪಟ್ಟಿದ್ದೇವೆ. ಈಗ ನಾವು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ” ಎಂದು ಹೇಳಿದರು.

2024 ರ ಸಾರ್ವತ್ರಿಕ ಚುನಾವಣೆಗೆ ಎಐಎಡಿಎಂಕೆಯ ಆದ್ಯತೆಯ ಪಟ್ಟಿಯಲ್ಲಿ ಏನಿದೆ ಎಂಬುದರ ಕುರಿತು ಮಾತನಾಡಿದ ಪಳನಿಸ್ವಾಮಿ, ನಾವು ತಮಿಳುನಾಡಿನ ಜನರ ಹಕ್ಕುಗಳಿಗಾಗಿ ಹೋರಾಡಲು ಗಮನಹರಿಸಿರುವುದಾಗಿ ಹೇಳಿದ್ದಾರೆ.

ನಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೆಲವರು ಕೇಳುತ್ತಿದ್ದಾರೆ. 2019ರಲ್ಲಿ ಒಡಿಶಾ ಸಿಎಂ, ಪಶ್ಚಿಮ ಬಂಗಾಳ ಸಿಎಂ, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪ್ರಧಾನಿ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದೀರಾ? ರಾಜ್ಯದ ರಕ್ಷಣೆಗಾಗಿ ಚುನಾವಣೆ ಎದುರಿಸಿದ ರೀತಿ, ಎಐಎಡಿಎಂಕೆ ತಮಿಳುನಾಡಿನ ಜನರ ಹಕ್ಕುಗಳನ್ನು ಸಹ ರಕ್ಷಿಸುತ್ತದೆ. ನಾವು ಜನರನ್ನು ಭೇಟಿ ಮಾಡುತ್ತೇವೆ. ಅವರ ಮತಗಳನ್ನು ಕೇಳುತ್ತೇವೆ. ಜನರು ನಮ್ಮ ಯಜಮಾನರು ಎಂದು ಹೇಳಿದ್ದಾರೆ. ಎಐಎಡಿಎಂಕೆ ಪಕ್ಷವು ಸಂಸತ್ ನಲ್ಲಿ ತಮಿಳುನಾಡಿನ ಜನರ ಧ್ವನಿ ಎತ್ತಲಿದೆ ಎಂದು ಹೇಳಿದರು.

ನಾವು ತಮಿಳುನಾಡಿನ ಜನರ ಮತದಿಂದ ಗೆದ್ದಿದ್ದೇವೆ, ಸಂಸತ್​​​ನಲ್ಲಿ ನಾವು ಅವರ ಧ್ವನಿಯಾಗುತ್ತೇವೆ, ಇದು ನಮ್ಮ ಸಿದ್ಧಾಂತವಾಗಿದೆ.  ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಯಾವುದೇ ಸಮಸ್ಯೆ ಎದುರಿಸಿದರೆ, ಎಐಎಡಿಎಂಕೆ ಧ್ವನಿ ನೀಡುವ ಪಕ್ಷವಾಗಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಹೇಳಿಕೆಯಿಂದುಂಟಾದ ತರ್ಕದ ನಡುವೆ ಎಐಎಡಿಎಂಕೆ ಕಳೆದ ತಿಂಗಳು ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿತು. ಸನಾತನ ಧರ್ಮದ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ನಡುವೆಯೇ ಅಣ್ಣಾಮಲೈ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಸಿಎನ್ ಅಣ್ಣಾದೊರೈ ಅವರು 1956 ರಲ್ಲಿ ಹಿಂದೂ ಧರ್ಮವನ್ನು ಅವಮಾನಿಸಿದ್ದು ನಂತರ ಕ್ಷಮೆಯಾಚಿಸಿದ್ದರು ಎಂದು ಹೇಳಿದ್ದರು

ಇದು ಎಐಎಡಿಎಂಕೆಯೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು . ಸಿಎನ್ ಅಣ್ಣಾದೊರೈ ಅವರು ಎಐಎಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ರಾಜಕೀಯ ಮಾರ್ಗದರ್ಶಕರಾಗಿದ್ದರು. ಅವರು ಪಕ್ಷದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ.

ತಮ್ಮ ಹೇಳಿಕೆಗೆ ರಾಜ್ಯ ಬಿಜೆಪಿ ಮುಖ್ಯಸ್ಥರು ಕ್ಷಮೆಯಾಚಿಸಬೇಕು ಎಂದು ಎಐಎಡಿಎಂಕೆ ಆಗ್ರಹಿಸಿದೆ. ಆದರೆ ಅಣ್ಣಾಮಲೈ ಇದಕ್ಕೆ ನಿರಾಕರಿಸಿದ್ದರು.

ಇದನ್ನೂ ಓದಿ:  ಬಿಜೆಪಿಯ ಗೇಮ್ ಚೇಂಜರ್ ಅಣ್ಣಾಮಲೈ; ಬದುಕು, ರಾಜಕೀಯ ಬಗ್ಗೆ ಮುಕ್ತ ಮಾತು

ಉಭಯ ಪಕ್ಷಗಳು ತಮ್ಮ ನಿಲುವಿನಲ್ಲಿ ಅಚಲವಾಗಿದ್ದ ಕಾರಣ, ಮೈತ್ರಿ ಉಳಿಸುವ ಕೊನೆಯ ಪ್ರಯತ್ನವಾಗಿ ಆಯೋಜಿಸಲಾದ ಸಭೆಯು ನಿರೀಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಪಳನಿಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯ ಬಗ್ಗೆ ಯಾವುದೇ ಊಹಾಪೋಹಗಳಿಗೆ ತೆರೆ ಎಳೆದಿವೆ.

ಎಐಎಡಿಎಂಕೆ 2019 ರ ಲೋಕಸಭೆ ಮತ್ತು ಅದೇ ವರ್ಷ ರಾಜ್ಯ ಚುನಾವಣೆ ಸೇರಿದಂತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿದೆ. ಈ ವರ್ಷದ ಆರಂಭದಲ್ಲಿ ಈರೋಡ್‌ನಲ್ಲಿ ನಡೆದ ಉಪಚುನಾವಣೆಯ ಪೂರ್ವಭಾವಿಯಾಗಿ ಎರಡು ಪಕ್ಷಗಳ ನಾಯಕರು ಒಟ್ಟಿಗೆ ಪ್ರಚಾರ ಮಾಡದಿರುವುದು ಮೈತ್ರಿಯಲ್ಲಿನ ಒತ್ತಡವು ಸ್ಪಷ್ಟವಾಗಿ ಕಂಡುಬಂದಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠೆ ಜೆ ಜಯಲಲಿತಾ ಅವರ ಮರಣದ ಆರು ವರ್ಷಗಳ ನಂತರ ಪಳನಿಸ್ವಾಮಿ ಅವರು ಪಕ್ಷದ ಉನ್ನತ ನಾಯಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಸಮಯದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯ ಕುರಿತು ಎಐಎಡಿಎಂಕೆಯ ದೊಡ್ಡ ನಿರ್ಧಾರವು ಬಂದಿದೆ. ಪಳನಿಸ್ವಾಮಿ ಅವರೊಂದಿಗೆ ಪಕ್ಷದ ನಾಯಕತ್ವವನ್ನು ಹಂಚಿಕೊಂಡಿದ್ದ ಓ ಪನ್ನೀರಸೆಲ್ವಂ ಅವರನ್ನು ಕಳೆದ ವರ್ಷ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟಿಸಲಾಗಿತ್ತು. ಆದ್ದರಿಂದ, 2024 ರ ಚುನಾವಣೆಯು ಪಳನಿಸ್ವಾಮಿ ಅವರ ನಾಯಕತ್ವಕ್ಕೆ ಮಹತ್ತರ ಪರೀಕ್ಷಿಯಾಗಲಿದ್ದು, ಬಿಜೆಪಿಯಿಂದ ದೂರವಾಗಿರುವ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿಯೂ ನೋಡಬೇಕಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ