ನನ್ನ ಪತಿ ಸಮಾಜಕ್ಕೆ ಬಹಳಷ್ಟು ನೀಡಿದರು, ಆದರೆ ಸಮಾಜದಿಂದ ಅವರಿಗೆ ಸಿಕ್ಕಿದ್ದು ಮಾತ್ರ ಶೂನ್ಯ: ನೂತನಾ, ಪ್ರವೀಣ್ ಪತ್ನಿ

Edited By:

Updated on: Jul 27, 2022 | 1:34 PM

ವೈದ್ಯಕೀಯ ವಿಜ್ಞಾನ ಬಹಳ ಮುಂದುವರಿದಿದೆ ಅಂತ ಹೇಳುತ್ತಾರೆ. ಅದರೆ ಅದಕ್ಕೆ ತನ್ನ ಪತಿಯನ್ನು ಉಳಿಸಲಾಗಲಿಲ್ಲ ಅಂತ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯುವ ಪ್ರಯತ್ನ ಮಾಡುತ್ತಾ ನೂತನಾ ಹೇಳಿದರು.

ದಕ್ಷಿಣ ಕನ್ನಡ: ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿ ನೂತನಾ (Nutana) ಅವರನ್ನು ಸಮಾಧಾನಗೊಳ್ಳಲಾರರು. ಕಳೆದ ರಾತ್ರಿಯಿಂದ ಅವರು ಒಂದೇ ಸಮ ರೋದಿಸುತ್ತಿದ್ದಾರೆ. ತನ್ನ ಪತಿಯಿಂದ ಅಷ್ಟೆಲ್ಲ ಸಹಾಯ ಪಡೆದ ಸಮಾಜಕ್ಕೆ (society) ಅವರಿಗೆ ಮಾತ್ರ ಏನನ್ನೂ ನೀಡಲಿಲ್ಲ. ವೈದ್ಯಕೀಯ ವಿಜ್ಞಾನ ಬಹಳ ಮುಂದುವರಿದಿದೆ ಅಂತ ಹೇಳುತ್ತಾರೆ. ಅದರೆ ಅದಕ್ಕೆ ತನ್ನ ಪತಿಯನ್ನು ಉಳಿಸಲಾಗಲಿಲ್ಲ ಅಂತ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯುವ ಪ್ರಯತ್ನ ಮಾಡುತ್ತಾ ನೂತನಾ ಹೇಳಿದರು.