ರೌಡಿಸಂ ಬಿಟ್ಟು ಒಳ್ಳೆಯವನಾಗಿ ಬದುಕುತ್ತಿದ್ದ ನನ್ನ ಪತಿಗೆ ಉಳಿಗಾಲವಿಲ್ಲದಂತಾಯಿತು: ಶೃತಿ, ಸಂತೋಷ ಕುಮಾರ್ ಪತ್ನಿ
ತನ್ನ ನಡಾವಳಿ ಮತ್ತು ಬದುಕಿನಲ್ಲಿ ಬದಲಾವಣೆ ತಂದುಕೊಂಡು ಒಳ್ಳೆಯವರಾಗಿ ಬದುಕುತ್ತಿದ್ದ ತನ್ನ ಪತಿಗೆ ಈ ಗತಿ ಬಂದಿದೆ, ಅವರನ್ನು ಕೊಲೆ ಮಾಡಿದವರು ಯಾರೇ ಆಗಿರಲಿ ಪೊಲೀಸರು ಅವರ ಎನ್ಕೌಂಟರ್ ಮಾಡಿ ಮುಗಿಸಬೇಕು ಎಂದು ಸಂತೋಷ ಕುಮಾರ್ ಪತ್ನಿ ಶೃತಿ ಹೇಳುತ್ತಾರೆ. ರಾಜಕೀಯ ವೈಷಮ್ಯದಿಂದ ಅವರ ಕೊಲೆಯಾಗಿರುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.
ದಾವಣಗೆರೆ, ಮೇ 6: ನಿನ್ನೆ ಸಾಯಂಕಾಲ ಸುಮಾರು 7-8 ಯುವಕರಿಂದ ಭಯಾನಕವಾಗಿ ಹತ್ಯೆಯಾದ ಸಂತೋಷ ಕುಮಾರ ಉರುಫ್ ಕುಣುಮಾ ಪತ್ನಿ ಶೃತಿ ಕಣ್ಣೀರು ಹಾಕುತ್ತ ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ತನ್ನ ಪತಿ ಎಲ್ಲ ಕೆಟ್ಟ ವ್ಯವಹಾರಗಳನ್ನು ಬಿಟ್ಟು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡು ಒಬ್ಬ ಸದ್ಗೃಹಸ್ಥನ ಹಾಗೆ ಬದುಕುತಿದ್ದರು, ತಾನು ರೌಡಿಸಂ ಮಾಡಿಕೊಂಡಿದ್ದರೆ ಮಕ್ಕಳ ಓದು ಮತ್ತು ಭವಿಷ್ಯ ಹಾಳಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಶೃತಿ ಹೇಳುತ್ತಾರೆ. ಬೇಸಾಯವನ್ನೂ ಮಾಡಿಕೊಂಡಿದ್ದ ತನ್ನ ಪತಿ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿದ್ದರು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಈ ವರ್ಷ ದಾವಣಗೆರೆ ಜಿಲ್ಲೆಯಲ್ಲಿ ಮೂವರು ದಲಿತರ ಕೊಲೆ, 8 ಮಹಿಳೆಯರ ಮೇಲೆ ಅತ್ಯಾಚಾರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us