My India My Life Goals: ಜಲಮಾಲಿನ್ಯವೂ ಜಗತ್ತಿನ ದೊಡ್ಡ ಸಮಸ್ಯೆ, ನದಿ, ಕೊಳಗಳಲ್ಲಿ ಕಸ ಎಸೆಯಬೇಡಿ

|

Updated on: Aug 09, 2023 | 6:37 PM

My India My Life Goals: ಶಬ್ಧ ಮಾಲಿನ್ಯದಂತೆಯೇ ಜಲಮಾಲಿನ್ಯವೂ ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಜಲಮಾಲಿನ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ

ಶಬ್ಧ ಮಾಲಿನ್ಯದಂತೆಯೇ ಜಲಮಾಲಿನ್ಯವೂ ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಜಲಮಾಲಿನ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಮತ್ತು ಮುಂದಿನ ದಿನಗಳಲ್ಲಿ ಇದು ನಮಗೆ ದೊಡ್ಡ ಮಾರಕವಾಗಬಹುದು. ಇದಕ್ಕಾಗಿ ನಾವು ನಮ್ಮಿಂದಲೇ ಜಲಮಾಲಿನ್ಯ ನಿಯಂತ್ರಣ ಪ್ರಾರಂಭಿಸಬೇಕು. ಜಲ ಮಾಲಿನ್ಯವು ಜಾಗತಿಕ ಸಮಸ್ಯೆಯಾಗಿದೆ. ಕಲುಷಿತ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಕೆಲವೊಮ್ಮೆ ಇದು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಇದಕ್ಕಾಗಿ ನದಿ, ಕೊಳಗಳಲ್ಲಿ ಕಸ ಎಸೆಯಬಾರದು. ಪ್ಲಾಸ್ಟಿಕ್ ತ್ಯಾಜ್ಯವನ್ನು ನೀರಿನಲ್ಲಿ ಎಸೆಯಬಾರದು. ಪ್ರತಿಯೊಬ್ಬರೂ ಇಂತಹ ಕ್ರಮಗಳನ್ನು ಅನುಸರಿಸಬೇಕು. ಇದರ ಬಗ್ಗೆ ಗ್ರಾಮ, ನಗರಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನನ್ನ ಭಾರತ ನನ್ನ ಜೀವನದ ಗುರಿ ಅಭಿಯಾನಯವನ್ನು ನಡೆಸುತ್ತಿದೆ.

Published On - 3:23 pm, Wed, 9 August 23

Follow us on