My India My Life Goals: ಪರಿಸರ ಸಂರಕ್ಷಣೆ ಕೇವಲ ಆಡುಮಾತಲ್ಲ, ಅದಕ್ಕೆ ನಮ್ಮ ಬದ್ಧತೆಯ ಅವಶ್ಯಕತೆಯಿದೆ!
ಅಮೂಲ್ಯವಾಗಿರುವ ನೀರನ್ನು ನಾವು ನಾಳಿನ ಬಗ್ಗೆ ಯೋಚಿಸದೆ ಪೋಲು ಮಾಡುತ್ತೇವೆ. ನಿಸರ್ಗದತ್ತ ಶಕ್ತಿ ಬಳಕೆಗೆ ನಾವು ಹಿಂದೇಟು ಹಾಕುತ್ತೇವೆ. ಪರಿಸರದ ಅರಿವು ಮತ್ತು ಪರಿಸರದ ಶಕ್ತಿಯನ್ನು ಅರ್ಥಮಾಡಿಕೊಂಡು ರೀಸೈಕ್ಲಿಂಗ್ ಮಾಡಬಹುದಾದ ವಸ್ತುಗಳ ಬಳಕೆಗೆ ಆದ್ಯತೆ ನೀಡಿದರೆ, ಭೂಮಿಯ ಮೇಲಿನ ಬದುಕು ಸುಂದರವಾಗುತ್ತದೆ.
My India My Life Goals: ಪರಿಸರ ಸಂರಕ್ಷಣೆಯ ಕಾಳಜಿ ಪ್ರತಿಯೊಬ್ಬರಲ್ಲಿ ಇರಲೇಬೇಕು ಅನ್ನೋದು ಸದ್ಯದ ವಾಸ್ತವ. ಪರಿಸರ (environment) ಒಂದು ಸೀಮಿತ ಪದವಲ್ಲ, ಅದು ಬಹಳ ವಿಸ್ತೃತ ಮತ್ತು ಅಗಾಧವಾದದ್ದು. ಜಾನುವಾರುಗಳ (fauna) ಪಾಲನೆ-ಪೋಷಣೆ, ಸಂರಕ್ಷಣೆ ಪರಿಸರದ ಭಾಗವೇ. ಜಾನುವಾರುಗಳಿಗೆ ಎಲ್ಲ ಋತುಗಳಲ್ಲೂ (all seasons) ಮೇಯಲು ಮೇವು ಕಲ್ಪಿಸಬೇಕು, ಹಾಗಾಗಿ ಅವುಗಳ ಆಹಾರಕ್ಕೆ ಹಸಿರು ಹುಲ್ಲುಗಾವಲು ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಪ್ರಕೃತಿಯ ಜೀವ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ವೈಜ್ಞಾನಿಕ ಅರಿವು ಇಟ್ಟುಕೊಳ್ಳಬೇಕು. ತ್ಯಾಜ್ಯ ನಿರ್ವಹಣೆಯ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ. ಅಮೂಲ್ಯವಾಗಿರುವ ನೀರನ್ನು ನಾವು ನಾಳಿನ ಬಗ್ಗೆ ಯೋಚಿಸದೆ ಪೋಲು ಮಾಡುತ್ತೇವೆ. ನಿಸರ್ಗದತ್ತ ಶಕ್ತಿ ಬಳಕೆಗೆ ನಾವು ಹಿಂದೇಟು ಹಾಕುತ್ತೇವೆ. ಪರಿಸರದ ಅರಿವು ಮತ್ತು ಪರಿಸರದ ಶಕ್ತಿಯನ್ನು ಅರ್ಥಮಾಡಿಕೊಂಡು ರೀಸೈಕ್ಲಿಂಗ್ ಮಾಡಬಹುದಾದ ವಸ್ತುಗಳ ಬಳಕೆಗೆ ಆದ್ಯತೆ ನೀಡಿದರೆ, ಭೂಮಿಯ ಮೇಲಿನ ಬದುಕು ಸುಂದರವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ