ಕುರಿಯ ಹಾಗೆ ಮಗನನ್ನು ಕೊಚ್ಚಿ ಹಾಕಿದ್ದಾರೆ, ನನ್ನ ಮಗ ಕೆಟ್ಟವನಲ್ಲ: ವಿಜಯಲಕ್ಷ್ಮಿ, ಬಿಕ್ಲು ಶಿವ ತಾಯಿ

ಅರುಣ್​ ಕುಮಾರ್​ ಬೆಳ್ಳಿ

Updated on: Jul 17, 2025 | 1:21 PM

ಅವನನ್ನು ಕೊಂದಿದ್ದು ಯಾರು ಅಂತ ತನಗೆ ಗೊತ್ತಿಲ್ಲ, ಅದರೆ ಜಗ ಎನ್ನನುವವನು ಮಾತ್ರ ತನ್ನ ಕುಟುಂಬದೊಂದಿಗೆ ಆತ್ಮೀಯವಾಗಿದ್ದ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಮನೆಯೊಳಗೆ ನೀವು ಕಾವಲು ಮತ್ತು ಮನೆ ಹೊರಗಡೆ ನಾನು ಕಾವಲು ಎಂದು ಹೇಳುತ್ತಿದ್ದ. ಆದರೆ, ಅವನಿಗೆ ಇತ್ತೀಚಿಗೆ ಬಹಳ ದುಡ್ಡು ಬಂದಿತ್ತು ಅಂತ ತನ್ನ ಮಗ ಹೇಳುತ್ತಿದ್ದ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.

ಬೆಂಗಳೂರು, ಜುಲೈ 17: ಮಂಗಳವಾರ ಬರ್ಬರವಾಗಿ ಹತ್ಯೆಯಾದ ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರೂ ಮಗನ ಕೊಲೆಯ ಬಗ್ಗೆ ಮಾತಾಡುತ್ತಿದ್ದಾರೆ. ಶಿವಪ್ರಕಾಶ್ ಕೊಲೆಯ ಬರ್ಬರತೆಯನ್ನು ಹೇಳುವ ಅವರು ಕುರಿಯನ್ನು ಕಟ್ ಮಾಡುವ ಹಾಗೆ ಅವನನ್ನು ಕೊಯ್ದಿದ್ದಾರೆ, ಖೀಮಾ ಥರ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ ಎಂದು ಹೇಳುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಮಗ ಕೊಲೆಯಾದ ದಿನ ಫೋನಲ್ಲಿ ಯಾರೊಂದಿಗೋ ಮಾತಾಡುತ್ತಿದ್ದವನು ಹಾಗೆಯೇ ಹೊರಗೆ ಹೋದ. ಸ್ವಲ್ಪ ಹೊತ್ತಿನ ಬಳಿಕ ಜನ ಕೂಗಾಡೋದು ಕೇಳಿಸಿತು. ತಾನು ಹೋಗಿ ನೋಡಿದಾಗ ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಗೊತ್ತಾಯಿತು ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.

ಇದನ್ನೂ ಓದಿ:   ಬೆಂಗಳೂರಿನಲ್ಲಿ ರೌಡಿಶೀಟರ್​ ಕೊಲೆ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.