AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರೌಡಿಶೀಟರ್​ ಕೊಲೆ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್​ ಸೇರಿದಂತೆ ಐವರ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಬಿಕ್ಲು ಶಿವನ ತಾಯಿಯ ದೂರಿನ ಮೇರೆಗೆ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನಲ್ಲಿ ರೌಡಿಶೀಟರ್​ ಕೊಲೆ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​
ಬಿಜೆಪಿ ಶಾಸಕ ಬೈರತಿ ಬಸವರಾಜ್, ರೌಡಿಶೀಟರ್​ ಬಿಕ್ಲು ಶಿವ
ಗಂಗಾಧರ​ ಬ. ಸಾಬೋಜಿ
|

Updated on:Jul 16, 2025 | 11:30 AM

Share

ಬೆಂಗಳೂರು, ಜುಲೈ 16: ರೌಡಿಶೀಟರ್​ ಬಿಕ್ಲು ಶಿವ ಬರ್ಬರ ಕೊಲೆ (kill) ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ (MLA Byrati Basavaraj) ಸೇರಿ ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಬಿಕ್ಲು ಶಿವ ತಾಯಿ ವಿಜಯಲಕ್ಷ್ಮೀ ನೀಡಿದ ದೂರು ಆಧರಿಸಿ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್, ವಿಮಲ್, ಕಿರಣ್, ಅನಿಲ್, ಭೈರತಿ ಬಸವರಾಜ್​ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ದೇವರ ಸಾಕ್ಷಿಯಾಗಿ ನನಗೆ ಗೊತ್ತಿಲ್ಲ ಎಂದ ಭೈರತಿ ಬಸವರಾಜ್​

ಈ ಬಗ್ಗೆ ಟಿವಿ9ಗೆ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್​ ಹೇಳಿಕೆ ನೀಡಿದ್ದು, ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ತಾನೇ ಸಲಹೆ ಕೊಟ್ಟು ಒಡಹುಟ್ಟಿದ ಅಕ್ಕನಿಗೆ ಮೋಸ ಮಾಡಿದ ತಮ್ಮ

ಇದನ್ನೂ ಓದಿ
Image
ತಾನೇ ಸಲಹೆ ಕೊಟ್ಟು ಒಡಹುಟ್ಟಿದ ಅಕ್ಕನಿಗೆ ಮೋಸ ಮಾಡಿದ ತಮ್ಮ
Image
ನನ್ನ ಗಂಡನನ್ನು ಕೊಲೆ ಮಾಡದಿದ್ರೆ ಆತ್ಮಹತ್ಯೆ: ಮಹಿಳೆಯ ನೌಟಂಕಿ ಆಟ ಬಯಲು​
Image
ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ರೇಪ್, ಬೆಂಗಳೂರಿನಲ್ಲಿ ಮೂವರ ಬಂಧನ
Image
ಬೆಳಗಾವಿ: ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ

ಯಾರೇ ದೂರು ಕೊಟ್ಟರೂ ಎಫ್​ಐಆರ್ ದಾಖಲಿಸಬಹುದಾ? FIR​ ದಾಖಲಿಸುವುದಕ್ಕೂ ಮುನ್ನ ನನ್ನಿಂದ ಮಾಹಿತಿ ಪಡೆದಿದ್ದಾರಾ? ಈ ವಿಚಾರದಲ್ಲಿ ನನ್ನ ಹೆಸರು ತಂದಿದ್ದಕ್ಕೆ ತುಂಬಾ ಬೇಸರವಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಡೆದದ್ದೇನು?

ಮಂಗಳವಾರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಪುಟ್ ಪಾತ್ ಮೇಲೆ ನಿಂತಿದ್ದ. ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ8 ಕೊಲೆಗಡುಕರು ಬಿಕ್ಲು ಶಿವನ ಮೇಲೆ ಎರಗಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆತನನ್ನ ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿದ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಹೊಡೆದು ನೆತ್ತರು ಹರಿಸಿದ್ದಾರೆ. ಹೀಗಾಗಿ ಬಿಕ್ಲು ಶಿವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

ಇನ್ನು ಜಮೀನು ವಿಚಾರಕ್ಕೆ ರೌಡಿಶೀಟರ್ ಬಿಕ್ಲು ಶಿವ ಹಾಗೂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹುಡುಗರ ನಡುವೆ ಗಲಾಟೆ ಆಗಿತ್ತು. ಕಿತ್ತಗಾನಹಳ್ಳಿ ಬಳಿ ಸಿಂಗಾರೆಡ್ಡಿ ಎಂಬುವವರಿಗೆ ಸೇರಿದ ಸರ್ವೆ ನಂ. 212 ಜಿಪಿಎ ಮಾಡಿಸಿಕೊಂಡಿದ್ದ ಬಿಕ್ಲು ಶಿವ, ಇದನ್ನ ರದ್ದುಪಡಿಸಬೇಕು ಮತ್ತು ಪೊಸಿಷನ್ ಬಿಟ್ಟುಕೊಡಬೇಕೆಂದು ಬೆದರಿಕೆ ಹಾಕುತ್ತಿದ್ದ ವಿಡಿಯೋವನ್ನು ರೌಡಿಶೀಟರ್ ಶಿವಪ್ರಕಾಶ್ ಕಡೆಯವರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು.

ಇದನ್ನೂ ಓದಿ: ನನ್ನ ಗಂಡನನ್ನು ಕೊಲೆ ಮಾಡದಿದ್ರೆ ಆತ್ಮಹತ್ಯೆ: ಪ್ರಿಯಕರನೊಂದಿಗಿನ ಮಹಿಳೆಯ ನೌಟಂಕಿ ಆಟ ಬಯಲು​

ಈ ಕುರಿತು ಬಿಕ್ಲು ಶಿವ ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶಾಸಕ ಭೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಕಿರಣ್ ಸಹಚರರ ವಿರುದ್ಧ ದೂರು ನೀಡಿದ್ದ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ಕೂಡ ದಾಖಲಾಗಿತ್ತು. ಪೊಲೀಸ್ ಆಯುಕ್ತರಿಗೆ ದೂರು ನೀಡಿ 4 ತಿಂಗಳಲ್ಲೇ ಬಿಕ್ಲು ಶಿವ ಕೊಲೆ ಆಗಿದೆ. ಅದೇ ಗ್ಯಾಂಗ್​ನಿಂದ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:12 am, Wed, 16 July 25

ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದ ಟಿವಿ9
ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದ ಟಿವಿ9
SENA ದೇಶಗಳ ವಿರುದ್ಧ ಪಾರುಪತ್ಯ ಮುಂದುವರೆಸಿದ ಬುಮ್ರಾ
SENA ದೇಶಗಳ ವಿರುದ್ಧ ಪಾರುಪತ್ಯ ಮುಂದುವರೆಸಿದ ಬುಮ್ರಾ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?