ಮೈಸೂರು ದಸರಾ ಆಚರಣೆಗೆ ಆವಾಗ ಕೊರೊನಾ, ಈವಾಗ ‘ಬರ’ಸಿಡಿಲು -ಈ ಕುರಿತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Sep 21, 2023 | 8:09 PM

ದಸರಾ ಮಹೋತ್ಸವಕ್ಕೆ ದಿ‌ನಗಣನೆ ಆರಂಭವಾಗಿದ್ದು, ಆನೆ ತಾಲೀಮು ಹೊರತುಪಡಿಸಿದ್ರೆ ಮತ್ತಾವುದೇ ಚಟುವಟಿಕೆಗಳು ಆರಂಭವಾಗಿಲ್ಲ. ದಸರಾ ಆಚರಣೆ ಹೇಗೆ ಮಾಡಬೇಕು ಅನ್ನೋದಕ್ಕೂ ಅಧಿಕಾರಿಗಳಿಗೆ ಯಾವುದೇ ಮಾರ್ಗದರ್ಶನ ಕೂಡ ಇಲ್ಲ. ಈ ನಡುವೆ ರೈತರು ಸರಳ ಸಾಂಪ್ರಾದಾಯಿಕ ದಸರಾ ಆಚರಣೆ ಮಾಡಲಿ ಅಂತಿದ್ದಾರೆ. ಹೊಟ್ಟೆಗೆ ಇಟ್ಟಿಲ್ಲ ಅಂದಮೇಲೆ ಜುಟ್ಟಿಗೆ ಯಾಕೆ ಮಲ್ಲಿಗೆ ಅನ್ನೋದು ರೈತರ ಪ್ರಶ್ನೆ ಕೂಡ.

ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಬರಸಿಡಿಲು ಬಡಿದಿದೆ. ಅದ್ಧೂರಿ ದಸರಾ ಆಚರಣೆ ಸಿದ್ಧತೆಯಲ್ಲಿದ್ದ ಸರ್ಕಾರ ಇದೀಗ ಸರಳ ದಸರಾ ಆಚರಣೆ ಮಾಡ್ಬೇಕ, ಅದ್ಧೂರಿ ದಸರಾ ಆಚರಣೆ ಮಾಡ್ಬೇಕ ಅನ್ನೋ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ… ಮೈಸೂರು ದಸರಾ ಎಷ್ಟೋಂದು ಸುಂದರ, ಅಂತಾ ದಸರಾ ಬಂದಾಗಲೆಲ್ಲ ಮೈಸೂರಿಗೆ ದಸರಾ ಕಳೆಬರ್ತಿತ್ತು. ಆದ್ರೀಗ ದಸರಾಗೆ ವರುಣಾಘಾತ ನೀಡಿದ್ದಕ್ಕೆ ಅದ್ಧೂರಿ ದಸರಾಗೆ ಈ ಬಾರಿ ಬರದ ಸಿಡಿಲು ಬಡಿದಂತಾಗಿದೆ. ಅದ್ಧೂರಿ ದಸರಾ ಆಚರಣೆ ಘೋಷಣೆ ಮಾಡಿ ದಸರಾ ಸಿದ್ಧತೆಯಲ್ಲಿತ್ತು. ಆದ್ರೆ ಮುಂಗಾರು ಕೈ ಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಬರಿದಾಗುವ ಹಂತಕ್ಕೆ‌ ತಲುಪಿವೆ. ಮತ್ತೊಂದು ಕಡೆ ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟದಲ್ಲಿದ್ದಾರೆ. ಇದು ಸರ್ಕಾರದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ದಸರಾ ಸರಳವಾಗಿ ಮಾಡ್ಬೇಕ ಅಥವಾ ಅದ್ಧೂರಿಯಾಗಿ ಮಾಡ್ಬೇಕ ಅನ್ನೋ ಬಗ್ಗೆ ಈವರೆಗೂ ಸರ್ಕಾರದ ನಿರ್ಧಾರ ಅಂತಿಮವಾಗಿಲ್ಲ.

ಈ ಹಿಂದೆ ಸರಳವಾಗಿ ದಸರಾ ನಡೆಸಿದ್ದ ಇತಿಹಾಸ

  1. 2000- ಡಾ.ರಾಜ್ ಕುಮಾರ್ ಅಪಹರಣದ ವೇಳೆ
  2. 2001 – ಗುಜರಾತ್ ಭೂಕಂಪ
  3. 2002 – ರಾಜ್ಯದಲ್ಲಿ ಬರ ಪರಿಸ್ಥಿತಿ
  4. 2011, 2012 – ಬರಗಾಲ
  5. 2015, 2016 – ಬರ, ರೈತರ ಆತ್ಮಹತ್ಯೆ
  6. 2020, 2021 – ಕೊರೊನಾ ಕರಿನೆರಳು, ಈ ವೇಳೆ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು.

ಇನ್ನು, ದಸರಾ ಮಹೋತ್ಸವಕ್ಕೆ ದಿ‌ನಗಣನೆ ಆರಂಭವಾಗಿದ್ದು, ಆನೆ ತಾಲೀಮು ಹೊರತುಪಡಿಸಿದ್ರೆ ಮತ್ತಾವುದೇ ಚಟುವಟಿಕೆಗಳು ಆರಂಭವಾಗಿಲ್ಲ. ದಸರಾ ಆಚರಣೆ ಹೇಗೆ ಮಾಡಬೇಕು ಅನ್ನೋದಕ್ಕೂ ಅಧಿಕಾರಿಗಳಿಗೆ ಯಾವುದೇ ಮಾರ್ಗದರ್ಶನ ಕೂಡ ಇಲ್ಲ. ಈ ನಡುವೆ ರೈತರು ಸರಳ ಸಾಂಪ್ರಾದಾಯಿಕ ದಸರಾ ಆಚರಣೆ ಮಾಡಲಿ ಅಂತಿದ್ದಾರೆ. ಹೊಟ್ಟೆಗೆ ಇಟ್ಟಿಲ್ಲ ಅಂದಮೇಲೆ ಜುಟ್ಟಿಗೆ ಯಾಕೆ ಮಲ್ಲಿಗೆ ಅನ್ನೋದು ರೈತರ ಪ್ರಶ್ನೆ ಕೂಡ. ಕಬ್ಬು ಬೆಳೆಗಾರರ ಸಂಘ‌ದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹೀಗೆ ಹೇಳುತ್ತಾರೆ. ವಿಡಿಯೋ ನೋಡಿ. ಒಟ್ಟಿನಲ್ಲಿ, ಎರಡು ವರ್ಷ ಕೊರೊನಾ, ಇದೀಗ ಬರ ಈ ನಡುವೆ ಸರ್ಕಾರ ಈ ಬಾರಿ ದಸರಾ ಆಚರಣೆ ಹೇಗೆ ಅನ್ನೋದು ಪ್ರಶ್ನೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 21, 2023 08:09 PM