ಮೈಸೂರು: ಇಂದಿನಿಂದ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವ ಆರಂಭ; ಸಿಎಂ ಸೇರಿ ಹಲವು ಗಣ್ಯರು ಭಾಗಿ
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ 2 ವರ್ಷಗಳ ನಂತರ ಅದ್ಧೂರಿ ಜಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಿಎಂ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ 2 ವರ್ಷಗಳ ಬಳಿಕ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಸಂಗೀತ, ಕಲೆ, ಕ್ರೀಡೆ, ಕೃಷಿಮೇಳ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ಚರ್ಮಗಂಟು ರೋಗ ಹಿನ್ನೆಲೆ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಹಸುಗಳ ಜಾತ್ರೆಯನ್ನ ರದ್ದು ಮಾಡಲಾಗಿದೆ. ಕಳೆದ 53 ವರ್ಷದಿಂದ ನಡೆದುಕೊಂಡು ಬಂದಿದ್ದ ಹಸುಗಳ ಜಾತ್ರೆ ಈ ಬಾರಿ ಇಲ್ಲದಂತಾಗಿದೆ. ಸುತ್ತೂರು ಜಾತ್ರೆಗೆ ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು. ನಿತ್ಯವೂ ಸುತ್ತೂರು ಮಠದಲ್ಲಿ 2 ಲಕ್ಷ ಜನರಿಗೆ ಅನ್ನ ದಾಸೋಹ ನಡೆಯಲಿದೆ. ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸಿಎಂ, ಸಚಿವರು ಸೇರಿ ಹಲವು ಗಣ್ಯರು ಭಾಗಿಯಾಗುವ ಹಿನ್ನಲೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಸುತ್ತೂರು ಮಠಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ಮಾಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
