Loading video

ಮಸೀದಿ ತೆರೆಸಿ ನೋಡಿ: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಸವಾಲು

|

Updated on: Mar 11, 2025 | 1:08 PM

ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿರುವ ವಿವಾದಿತ ಮಸೀದಿಯನ್ನು ಮುಚ್ಚಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದರೂ, ಅದನ್ನು ಮತ್ತೆ ತೆರೆಯಲು ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಂ ಮುಖಂಡರ ಈ ಕ್ರಮಕ್ಕೆ ತಾಲಿಬಾನಿ ಆಡಳಿತದ ಪ್ರಭಾವವಿದೆ ಎಂದು ಆರೋಪಿಸಲಾಗಿದೆ. ಈ ವಿವಾದದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಸೀದಿ ತೆರೆಯುವಂತೆ ಸವಾಲು ಹಾಕಿದ್ದಾರೆ.

ಮೈಸೂರು, ಮಾರ್ಚ್​ 11: ಕ್ಯಾತಮಾರನಹಳ್ಳಿ ವಿವಾದಿತ ಮಸೀದಿಯ ಬಾಗಿಲು ತೆಗೆಸಲು ರಾಜ್ಯ ಸರ್ಕಾರ ಯತ್ನಿಸಿದೆ. ಅನಧಿಕೃತ ಮಸೀದಿಯನ್ನು ಮತ್ತೆ ಆರಂಭಿಸಲು ಪ್ರಯತ್ನ ಶುರುವಾಗಿದೆ. ತಾಲಿಬಾನಿ ಸರಕಾರ ಇರುವ ಕಾರಣ ಇಂತಹ ಪ್ರಯತ್ನವನ್ನು ಮುಸ್ಲಿಂ ಮುಖಂಡರು ಆರಂಭಿಸಿದ್ದಾರೆ. ಸರ್ಕಾರ ಎಷ್ಟೆ ಪ್ರಯತ್ನ ಮಾಡಿದರು ಮಸೀದಿ ತೆರೆಯಲು ಬಿಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಮಸೀದಿ ತೆರೆಸಿ ನೋಡಿ, ಆಮೇಲೆ ಮುಂದಿನದ್ದು ಹೇಳುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಬಹಿರಂಗ ಸವಾಲು ಹಾಕಿದ್ದಾರೆ.