‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ’: ಡಿವಿಜಿ ಮಂಕುತಿಮ್ಮನ ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆ ಶಿವಕುಮಾರ್
ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಸ್ಥಾನ ನೀಡುವ ವಿಚಾರವಾಗಿ ಗದ್ದಲವೆಬ್ಬಿಸಿದ ಪ್ರತಿಪಕ್ಷ ನಾಯಕರಿಗೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಸಾಲು ಉಲ್ಲೇಖಿಸುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದರು. ಡಿಕೆ ಶಿವಕುಮಾರ್ ಹೇಳಿದ ಕಗ್ಗದ ಸಾಲು ಯಾವುದು? ಯಾಕೆ ಹೇಳಿದರು? ವಿವರಗಳಿಗೆ ವಿಡಿಯೋ ನೋಡಿ.
ಬೆಂಗಳೂರು, ಮಾರ್ಚ್ 11: ವಿಧಾನಸಭೆಯ ಬಜೆಟ್ ಕಲಾಪದ ವೇಳೆ ಮಂಗಳವಾರ ಗ್ಯಾರಂಟಿ ಅನುಷ್ಠಾನ ಸಮಿತಿ ಬಗ್ಗೆ ಚರ್ಚೆ ಕಾವೇರಿತು. ಇದೇ ವೇಳೆ, ಪ್ರತಿಪಕ್ಷಗಳ ನಾಯಕರ ಗದ್ದಲಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಸಾಲು ಉಲ್ಲೇಖಿಸಿ ಟಾಂಗ್ ನೀಡಿದರು. ‘‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ. ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ಧಾರವೆಷ್ಟಾಯ್ತೊ ಮಂಕುತಿಮ್ಮ’’ ಎಂದು ವಿಪಕ್ಷದವರನ್ನು ಲೇವಡಿ ಮಾಡಿದರು. ವಿಡಿಯೋ ಇಲ್ಲಿದೆ.
Latest Videos