ಹಲಾಲ್ ಬಜೆಟ್ ಅಲ್ಲವೆನ್ನುವ ಸಿದ್ದರಾಮಯ್ಯ ಇತರ ಜಾತಿ ನಿಗಮಗಳಿಗೆ ಎಷ್ಟು ಅನುದಾನ ನೀಡಿದ್ದಾರೆ? ಪ್ರತಾಪ್ ಸಿಂಹ
ಪದೇಪದೆ ಜಾತಿಗಣತಿ ಎಂದು ಹೇಳುವ ಮತ್ತು ಈಗಾಗಲೇ ಜಾತಿಗಣತಿ ಮಾಡಿಸಿದರೂ ಅದನ್ನು ಬಿಡುಗಡೆ ಮಾಡದೆ ಇಷ್ಟಿಷ್ಟನ್ನೇ ಲೀಕ್ ಮಾಡಿಸುತ್ತಿರುವ ಸಿದ್ದರಾಮಯ್ಯನವರಿಗೆ ಒಂದು ಸವಾಲು; ಜಾತಿಗಣತಿ ಮಾಡಿಸಿದಂತೆ ಯಾವ್ಯಾವ ಜಾತಿಯರವರು ಎಷ್ಟೆಷ್ಟು ತೆರಿಗೆ ನೀಡಿದ್ದಾರೆ ಅನ್ನೋದನ್ನು ಸಮೀಕ್ಷೆ ಮಾಡಿಸಲಿ; ಮುಸಲ್ಮಾನರು, ಕ್ರೈಸ್ತರು, ಬ್ರಾಹ್ಮಣರು-ಯಾರು ಎಷ್ಟು ತೆರಿಗೆ ನೀಡಿದ್ದಾರೆಂದು ಹೇಳಲಿ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು, ಮಾರ್ಚ್ 11: ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಬಜೆಟ್ ಅನ್ನು ಹಲಾಲ್ ಬಜೆಟ್, ಮುಸಲ್ಮಾನರ ಬಜೆಟ್ ಅಥವಾ ವಕ್ಫ್ ಬಜೆಟ್ ಅಂತ ಹೇಳುತ್ತಿರುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಬಜೆಟ್ ಗಾತ್ರ ರೂ 4.09ಲಕ್ಷ ಕೋಟಿ, ಅದರಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು ಒಂದು ಪರ್ಸೆಂಟ್ ಕೂಡ ಆಲ್ಲ ಅಂತ ಸಮರ್ಥನೆ ಬೇರೆ ಮುಖ್ಯಮಂತ್ರಿ ಮಾಡಿಕೊಳ್ಳುತ್ತಾರೆ, ಹಾಗಾದರೆ ಒಕ್ಕಲಿಗರು, ಬ್ರಾಹ್ಮಣರು, ವೀರಶೈವ ಲಿಂಗಾಯತರು ಮೊದಲಾದ ನಿಗಮಗಳಿಗೆ ಅವರು ಎಷ್ಟು ಅನುದಾನ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮಂಡಿಸಿದ್ದು ಕೇವಲ ಮುಸಲ್ಮಾನರಿಗೆ ವಿಶೇಷ ಪ್ಯಾಕೇಜ್ಗಳನ್ನು ಕಲ್ಪಿಸುವ ಬಜೆಟ್: ಬಿವೈ ವಿಜಯೇಂದ್ರ