Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮಂಡಿಸಿದ್ದು ಕೇವಲ ಮುಸಲ್ಮಾನರಿಗೆ ವಿಶೇಷ ಪ್ಯಾಕೇಜ್​ಗಳನ್ನು ಕಲ್ಪಿಸುವ ಬಜೆಟ್: ಬಿವೈ ವಿಜಯೇಂದ್ರ

ಸಿದ್ದರಾಮಯ್ಯ ಮಂಡಿಸಿದ್ದು ಕೇವಲ ಮುಸಲ್ಮಾನರಿಗೆ ವಿಶೇಷ ಪ್ಯಾಕೇಜ್​ಗಳನ್ನು ಕಲ್ಪಿಸುವ ಬಜೆಟ್: ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 08, 2025 | 4:22 PM

ಮುಸಲ್ಮಾನ ವಿದ್ಯಾರ್ಥಿಗಳು ವಿದೇಶಗಳಲ್ಲಿ ವ್ಯಾಸಂಗ ಮಾಡಲಿ ಸರ್ಕಾರದಿಂದ ಸಿಗುತ್ತಿದ್ದ ನೆರವನ್ನು ರೂ. 20 ಲಕ್ಷದಿಂದ ₹ 30 ಲಕ್ಷಕ್ಕೆ ಸಿದ್ದರಾಮಯ್ಯ ಹೆಚ್ಚಿಸಿದ್ದಾರೆ, ಮುಸ್ಲಿಂ ಮಹಿಳೆಯರ ಆತ್ಮರಕ್ಷಣೆಗೆ ಅಂತ ಬಜೆಟ್ ನಲ್ಲಿ ಹಣವನ್ನು ತೆಗೆದಿರಿಸಿದ್ದಾರೆ, ಹಿಂದೂ ವಿದ್ಯಾರ್ಥಿಗಳು ಮತ್ತು ಹಿಂದೂ ಮಹಿಳೆಯರ ಬಗ್ಗೆ ಸಿದ್ದರಾಮಯ್ಯನವರಿಗೆ ಯೋಚನೆ ಬರಲಿಲ್ಲವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಬೆಂಗಳೂರು ಮಾರ್ಚ್ 8: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ್ದು 16ನೇ ಮತ್ತು ತಮ್ಮ ರಾಜಕೀಯ ಬದುಕಿನ ಕೊನೆಯ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಸಿದ್ದರಾಮಯ್ಯ ಮಂಡಿಸಿರುವ ಬಜೆಟ್​ನಿಂದ ಯಾರಿಗೂ ಅನುಕೂಲವಿಲ್ಲ, ಬಿಜೆಟ್ ನಲ್ಲಿ ಕೃಷಿ ಕ್ಷೇತ್ರ, ರೈತರು, ಮಹಿಳೆಯರು, ಯುವಕರನ್ನು ಕೈಬಿಟ್ಟು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಅನ್ನು  ಮುಖ್ಯಮಂತ್ರಿ ಮಂಡಿಸಿದ್ದಾರೆ, ಮುಸಲ್ಮಾನರ ಓಲೈಕೆಗೆ ಅವರು ಈ ಮಟ್ಟಕ್ಕಿಳಿಯುತ್ತಾರೆ ಅಂತ ಎಣಿಸಿರಲಿಲ್ಲ ಎಂದು ವಿಜಯೇಂದ್ರ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ ₹ 233 ಕೋಟಿ ಖರ್ಚಾಗುತ್ತದೆ: ಸಿದ್ದರಾಮಯ್ಯ

Published on: Mar 08, 2025 03:24 PM