ರಾಯಚೂರಲ್ಲಿ ನಟಿ ಕೀರ್ತಿ ಸುರೇಶ್ ವೇದಿಕೆ ಮೇಲೆ ಕುಣಿದಾಗ ಅಭಿಮಾನಿಗಳ ಹೃದಯಬಡಿತ ತಪ್ಪಿದ್ದು ಸುಳ್ಳಲ್ಲ
ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್ ಮೂರು ತಿಂಗಳ ಹಿಂದೆ ತಾನು 15-ವರ್ಷಗಳಿಂದ ಪ್ರೀತಿಸುತ್ತಿದ್ದ ಅಂತೋನಿ ಥಟ್ಟಿಲ್ ರನ್ನು ಮದುವೆಯಾದರೂ ಅವರನ್ನು ಆರಾಧಿಸುವ ಭಕ್ತರ ಸಂಖ್ಯೆ ಕಮ್ಮಿಯಾಗಿಲ್ಲ. ಅವರು ಕನ್ನಡದಲ್ಲಿ ಇದುವರೆಗೆ ಒಂದು ಚಿತ್ರದಲ್ಲೂ ನಟಿಸಿಲ್ಲ, ಆದರೆ ಅಭಿಮಾನಿಗಳು ಮಾತ್ರ ಹೇರಳವಾಗಿದ್ದಾರೆ.
ರಾಯಚೂರು, ಮಾರ್ಚ್ 8: ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯೆನಿಸಿಕೊಂಡಿರುವ ಮತ್ತು ಸಾಂಪ್ರದಾಯಿಕ ಚೆಲುವಿನ ಒಡತಿ ಕೀರ್ತಿ ಸುರೇಶ್ (Keerthy Suresh) ಇವತ್ತು ನಗರಕ್ಕೆ ಆಗಮಿಸಿ ಶಾಪಿಂಗ್ ಮಾಲೊಂದನ್ನು ಉದ್ಘಾಟಿಸಿದರು. ಈರುಳ್ಳಿ ಬಣ್ಣದ ಸೀರೆಯಲ್ಲಿ ಸೌಂದರ್ಯದ ಖನಿಯಂತೆ ಕಾಣುತ್ತಿದ್ದ ಕೀರ್ತಿ ನೆರಿದಿದ್ದ ಅಭಿಮಾನಿಗಳ ಕೋರಿಕೆ ಮೇರೆಗೆ ಸ್ಟೇಜ್ ಮೇಲೆ ಮೈದಣಿಯದ ಹಾಗೆ ಕುಣಿದು ರಂಜಿಸಿದರು. ಅವರು ಮೈ ಬಳುಕಿಸಿದಂತೆ ಅಭಿಮಾನಿಗಳು ಹುಚ್ಚೆದ್ದು ಕೂಗಾಡಿದರು ಮತ್ತು ಶಿಳ್ಳೆ ಚಪ್ಪಾಳೆಯೊಂದಿಗೆ ನಟಿಯನ್ನು ಅಭಿನಂದಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೀರ್ತಿ ಸುರೇಶ್ ಮತ್ತು ಆಂಟೊನಿಯ ಸಂಭ್ರಮದ ಕ್ಷಣಗಳು, ಚಿತ್ರಗಳಲ್ಲಿ ನೋಡಿ