ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲ ಭಾಷೆಯ ಚಿತ್ರಗಳಿಗೆ ₹200 ಟಿಕೆಟ್ ದರ ನಿಗದಿ, ಸರ್ಕಾರದ ಕ್ರಮ ಸ್ವಾಗತಿಸಿದ ಫಿಲ್ಮ್ ಚೇಂಬರ್
ಒಂಭತ್ತು ವಿಷಯಗಳ ಹಿಂದೆ ನಡೆದ ಸಭೆಯಲ್ಲಿ ಬೇರೆ ಭಾಷೆ ಚಿತ್ರಗಳ ಬಗ್ಗೆ ಯಾರೋ ಬ್ಯಾಟ್ ಬೀಸಿದಾಗ ಸಿದ್ದರಾಮಯ್ಯ ಕನ್ನಡ ಚಿತ್ರಗಳ ಬಗ್ಗೆ ಮಾತ್ರ ಮಾತಾಡಲು ಸಭೆಗೆ ಬಂದಿದ್ದೇನೆ ಎಂದು ಹೇಳಿದ್ದರಂತೆ. ಮೈಸೂರಲ್ಲಿ ಫಿಲ್ಮ್ಸಿಟಿ ಆಗಬೇಕೆಂದು ಡಾ ರಾಜ್ಕುಮಾರ್ ತುಂಬಾ ಆಸೆ ಇಟ್ಟುಕೊಂಡಿದ್ದಂತೆ, ಫಿಲ್ಮ್ಸಿಟಿಯನ್ನು ಅಲ್ಲಿ ಸ್ಥಾಪಿಸಲು ಚಿತ್ರರಂಗದವರಿಗಿಂತ ಮುಖ್ಯಮಂತ್ರಿ ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಗೋವಿಂದು ಹೇಳಿದರು.
ಬೆಂಗಳೂರು, ಮಾರ್ಚ್ 8: ಕನ್ನಡ ಚಿತ್ರೋದ್ಯಮ ಖುಷಿಯಿಂದ ಬೀಗುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ (Multiplexes) ಏಕರೂಪ ಟಿಕೆಟ್ ದರದ ಬಗ್ಗೆ ಸಿಎಂ ಸಿದ್ದರಾಮಯ್ಯ ನಿನ್ನೆ ಬಜೆಟ್ ನಲ್ಲಿ ಘೋಷಣೆ ಮಾಡಿರುವುದನ್ನು ಫಿಲ್ಮ್ ಚೇಂಬರ್ ಸಂತಸದಿಂದ ಸ್ವಾಗತಿಸಿದೆ. ಇದೇ ಹಿನ್ನೆಲೆಯಲ್ಲಿ ಚೇಂಬರ್ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ಮಲ್ಟಿಪ್ಲೆಕ್ಸ್ ಗಳಲ್ಲಿ ಎಲ್ಲ ಭಾಷೆಯ ಸಿನಿಮಾಗಳಿಗೆ ರೂ 200 ಟಿಕೆಟ್ ದರವನ್ನು ನಿಗದಿಪಡಿಸುವುದು 2016ರಲ್ಲೇ ಚರ್ಚೆಯಾಗಿತ್ತು ಮತ್ತು ಆಗಲೂ ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂದು ಹೇಳಿ, ಆದೇಶ ನೆನೆಗುದಿಗೆ ಯಾಕೆ ಬಿತ್ತು ಅನ್ನೋದನ್ನು ವಿವರಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಡಿಕೆಶಿ ಹೇಳಿಕೆಗೆ ಸಾರಾ ಗೋವಿಂದು ಉತ್ತರ