ಕೀರ್ತಿ ಸುರೇಶ್ ಧರಿಸಿದ ಈ ಡ್ರೆಸ್ ಬೆಲೆ 2.45 ಲಕ್ಷ ರೂಪಾಯಿ; ನಟಿಯ ಒಟ್ಟು ಆಸ್ತಿ ಎಷ್ಟು?
ಗಂಡನ ಜೊತೆ ಕೀರ್ತಿ ಸುರೇಶ್ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಅವರು ಧರಿಸಿದ ಗೌನ್ ಬೆಲೆ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. 2.45 ಲಕ್ಷ ರೂಪಾಯಿ ಬೆಲೆಯ ಡ್ರೆಸ್ ಧರಿಸಿ ಕೀರ್ತಿ ಸುರೇಶ್ ಅವರು ಮಿಂಚಿದ್ದಾರೆ. ಕೀರ್ತಿ ಸುರೇಶ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಸೆಲೆಬ್ರಿಟಿಗಳ ಜೀವನ ಸಖತ್ ಐಷಾರಾಮಿ ಆಗಿರುತ್ತದೆ. ಅವರು ಧರಿಸುವ ಬಟ್ಟೆಗಳ ಬೆಲೆ ಕೇಳಿದರೆ ಖಂಡಿತಾ ಶಾಕ್ ಆಗುತ್ತದೆ. ಬಹುತೇಕ ನಟ-ನಟಿಯರು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೊಮ್ಮೆ ಧರಿಸುವುದಿಲ್ಲ. ಹಾಗಿದ್ದರೂ ಕೂಡ ಅವರು ಪ್ರತಿ ಉಡುಗೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಕೀರ್ತಿ ಸುರೇಶ್ ಧರಿಸಿದ ಈ ಗೌನ್. ಹೌದು, ಹಸಿರು ಬಣ್ಣದ ಈ ಗೌನ್ ಬೆಲೆ ಬರೋಬ್ಬರಿ 2.45 ಲಕ್ಷ ರೂಪಾಯಿ! ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಬೆಲೆ ಕೇಳಿ ನೆಟ್ಟಿಗರು ಹೌಹಾರಿದ್ದಾರೆ.
ಕೀರ್ತಿ ಸುರೇಶ್ ಅವರಿಗೆ ಸಖತ್ ಬೇಡಿಕೆ ಇದೆ. ಇತ್ತೀಚೆಗೆ ಅವರ ಮದುವೆ ನೆರವೇರಿತು. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಪತಿ ಆ್ಯಂಟೊನಿ ತಟ್ಟಿಲ್ ಜೊತೆ ಪಾರ್ಟಿ ಮಾಡಿದ್ದಾರೆ. ಗೋವಾದಲ್ಲಿ ಈ ಪಾರ್ಟಿ ನಡೆದಿದ್ದು, ಈ ವೇಳೆ ಕೀರ್ತಿ ಸುರೇಶ್ ಧರಿಸಿದ ಗೌನ್ ಕಣ್ಮನ ಸೆಳೆಯುತ್ತಿದೆ. ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ ಅವರು ಮಿರಿ ಮಿರಿ ಮಿಂಚುವ ಈ ಗೌನ್ ವಿನ್ಯಾಸಗೊಳಿಸಿದ್ದಾರೆ.
View this post on Instagram
ಅದ್ದೂರಿಯಾಗಿ ನಡೆದ ಪಾರ್ಟಿಯ ಫೋಟೋಗಳನ್ನು ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿಯ ಜೊತೆ ಅವರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಕೀರ್ತಿ ಸುರೇಶ್ ತುಂಬ ಆ್ಯಕ್ಟೀವ್ ಆಗುತ್ತಾರೆ. ಅಭಿಮಾನಿಗಳಿಗಾಗಿ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ: ಕೀರ್ತಿ ಸುರೇಶ್ ಕ್ರಿಶ್ಚಿಯನ್ ಮದುವೆ ಫೋಟೋಗಳು
ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಕೀರ್ತಿ ಸುರೇಶ್ ಅವರು ಬಾಲಿವುಡ್ನಲ್ಲೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ಅವರ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ತಕ್ಕಂತೆ ಅವರು ಕೈ ತುಂಬ ಸಂಭಾವನೆ ಪಡೆಯುತ್ತಾರೆ. ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ 41 ಕೋಟಿ ರೂಪಾಯಿ. ಕೀರ್ತಿ ಸುರೇಶ್ ಪತಿ ಆ್ಯಂಟೋನಿ ತಟ್ಟಿಲ್ ಉದ್ಯಮಿ ಆಗಿದ್ದು ಅವರು ಅಂದಾಜು 150 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಈ ದಂಪತಿಯ ಲೈಫ್ ಸ್ಟೈಲ್ ಇದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಡ್ರೆಸ್ ಧರಿಸಿ ಅವರು ಮಿಂಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.