ವಿಜಯೇಂದ್ರಗೆ ದುಬೈ ಮೇಲೆ ಜಾಸ್ತಿ ಪ್ರೀತಿ, ಗೋಲ್ಡ್ ಸ್ಮಗ್ಲಿಂಗ್ನಲ್ಲಿ ಶಾಮೀಲು ಸಚಿವರ ಹೆಸರು ಗೊತ್ತಿರಬಹುದು: ಪ್ರಿಯಾಂಕ್ ಖರ್ಗೆ
ಶಾಸಕರಾಗಲೀ, ಮಂತ್ರಿಗಳಾಗಲೀ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನದ ಬೇಡಿಕೆ ಇಡುವುದರಲ್ಲಿ ಯಾವ ತಪ್ಪೂ ಇಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಲ್ಲಿರುವುದರಿಂದ ಜನರ ನಿರೀಕ್ಷೆ ಸಹಜವಾಗಿಯೇ ಮಂತ್ರಿಗಳು ಮತ್ತು ಶಾಸಕರ ಮೇಲೆ ಹೆಚ್ಚಿರುತ್ತದೆ, ಮಂತ್ರಿಗಳಾಗಿಯೂ ತಾವು ಅನುದಾನ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡೋದಾಗಿ ಖರ್ಗೆ ಹೇಳಿದರು.
ಬೆಂಗಳೂರು, ಮಾರ್ಚ್ 11 : ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Ranya Rao gold smuggling case) ಸಿದ್ದರಾಮಯ್ಯ ಸಂಪುಟದ ಇಬ್ಬರ ಸಚಿವರು ಶಾಮೀಲಾಗಿದ್ದರೆ ಬಿವೈ ವಿಜಯೇಂದ್ರ ಅವರು ಹೆಸರು ಹೇಳಲಿ, ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ, ಸಿಬಿಐ ಮತ್ತು ಡಿಆರ್ಐ ಎರಡೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು, ತನಿಖೆ ಮಾಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಜಯೇಂದ್ರ ಅವರಿಗೆ ದುಬೈ ಕನೆಕ್ಷನ್ ಜಾಸ್ತಿ, ಅಲ್ಲೂ ಅವರ ಬ್ಯಾಂಕ್ ಖಾತೆಗಳಿವೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ, ಅವರಿಗೆ ಸಚಿವರು ಶಾಮೀಲಾಗಿರುವ ಬಗ್ಗೆ ಮಾಹಿತಿ ಇರಬಹುದು, ಹೆಸರು ಹೇಳಲಿ ಎಂದು ಖರ್ಗೆ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯೊಬ್ಬರ ಮಗಳು ಚಿನ್ನದ ಸ್ಮಗ್ಲಿಂಗ್ನಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ: ವಿಜಯೇಂದ್ರ