ಕಪಿಲಾ ನದಿಯಲ್ಲಿ ಮೀಯುವವರಿಂದ ಸೋಪು-ಶಾಂಪೂ ಬಳಕೆ, ಪುಣ್ಯನದಿಯ ನೀರು ಕಲುಷಿತ
ಪುಣ್ಯ ನದಿಗಳಲ್ಲಿ ಮೀಯುವಾಗ ಸೋಪು ಶಾಂಪೂ ಬಳಸಬಾರದು ಮತ್ತು ನದಿಗೆ ಹತ್ತಿರದ ಅಂಗಡಿಗಳಲ್ಲಿ ಅವುಗಳ ಮಾರಾಟ ಮಾಡಬಾರದು ಎಂದ ಸರ್ಕಾರ ನಿಯಮ ರೂಪಿಸಿದೆ. ಆದರೆ ಇದರ ಉಲ್ಲಂಘನೆ ಪ್ರತಿನಿತ್ಯ ಅಗುತ್ತಿದೆ. ಸೋಪು-ಶಾಂಪೂಗಳ ಬಳಕೆಯಿಂದ ನೀರು ಕಲುಷಿತಗೊಳ್ಳುವುದರ ಜೊತೆಗೆ ನದಿಯ ಪಾವಿತ್ರ್ಯತೆಯೂ ಹಾಳಾಗುತ್ತದೆ. ನದಿಯಲ್ಲಿ ಸ್ನಾನಕ್ಕೆ ಬರುವವರು ಯಾವಾಗ ಅರ್ಥಮಾಡಿಕೊಳ್ಳುತ್ತಾರೋ?
ಮೈಸೂರು, ಮಾರ್ಚ್ 11: ದಕ್ಷಿಣದ ಕಾಶಿ ಅಂತ ಹೆಸರಾಗಿರುವ ಜಿಲ್ಲೆಯ ನಂಜನಗೂಡು ಮೂಲಕ ಹರಿಯುವ ಕಪಿಲಾ ನದಿ (River Kapila) ನಮ್ಮ ನಾಡಿನ ಪುಣ್ಯನದಿಗಳಲ್ಲೊಂದು ಮತ್ತು ನದಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುವುದರ ಜೊತೆಗೆ ದೇಹದಲ್ಲಿರುವ ನೋವುಗಳು ಸಹ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಇಲ್ಲಿ ಪುಣ್ಯಸ್ನಾನಕ್ಕೆಂದು ಬರುವ ಜನ ಸೋಪು ಮತ್ತು ಶಾಂಪೂಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ ನದಿ ನೀರಿಗಿರುವ ನೋವು ನಿವಾರಕ ಹೆಸರು ಮಾಯವಾಗಿ ನೋವು ವಾಹಕ ನೀರು ಅನಿಸಿಕೊಳ್ಳಲಾರಂಭಿಸಿದೆ ಎಂದು ನಮ್ಮ ಮೈಸೂರು ವರದಿಗಾರ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Mahakumbh Mela 2025: ಇಂದಿನಿಂದ ಮಹಾಕುಂಭ ಮೇಳ ಆರಂಭ, 144 ವರ್ಷಗಳ ಬಳಿಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಯಾಗ್ರಾಜ್
Published on: Mar 11, 2025 11:11 AM
Latest Videos