ನಂಜನಗೂಡಿನ ಶ್ರೀಕಂಠೇಶ್ವರ ಹುಂಡಿಯಲ್ಲಿ 1.72 ಕೋಟಿ ಹಣ ಸಂಗ್ರಹ
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ನಂಜನಗೂಡು ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಂದು (ಮೇ 15) ಶ್ರೀಕಂಠೇಶ್ವರ ದೇಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬರೊಬ್ಬರಿ 1.72 ಕೋಟಿ ಹಣ ಸಂಗ್ರಹವಾಗಿದೆ.
ಮೈಸೂರು, ಮೇ 15: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ (Nanjangud Srikanteshwara Temple) ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ನಂಜನಗೂಡು ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ದೇಶ, ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು, ನೀಲಕಂಠನ ದರ್ಶನ ಪಡೆಯುತ್ತಾರೆ. ಇಲ್ಲಿ ನೆಲಸಿರುವ ವಿಷಕಂಠನು ಬೇಡಿದ ವರಗಳನ್ನು ನೀಡುತ್ತಾನೆ. ಇಂದು (ಮೇ 15) ಶ್ರೀಕಂಠೇಶ್ವರ ದೇಸ್ಥಾನದ ಹುಂಡಿ ಎಣಿಕೆ (Hundi Amount) ಕಾರ್ಯ ನಡೆದಿದ್ದು, ಬರೊಬ್ಬರಿ 1.72 ಕೋಟಿ ಹಣ, 92 ಗ್ರಾಂ 50 ಮಿಲಿಗ್ರಾಂ ಚಿನ್ನ ಹಾಗೂ 3 ಕೆಜಿ 500 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ದೇವಾಲಯದ ದಾಸೋಹ ಭವನದಲ್ಲಿ ಒಟ್ಟು 35 ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 1, 72, 85, 296 ರೂಪಾಯಿ, 33 ವಿದೇಶಿ ಕರೆನ್ಸಿ ಕಾಣಿಕೆ ಹುಂಡಿಯಲ್ಲಿ ಹಾಕಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಮಾಹಿತಿ ನೀಡಿದರು.