Mysuru Dasara 2025: ದಸರಾ ಗಜಪಡೆಗೆ ಭರ್ಜರಿ ತಾಲೀಮು, ಸಿಡಿಮದ್ದಿಗೆ ಅಂಜದ ಗಜ ಸೈನ್ಯ
ಜಂಬೂ ಸವಾರಿಗೆ ಸಿದ್ಧತೆ ಶುರುವಾಗಿದ್ದು, ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರೆಯ ಜಂಬೂ ಸವಾರಿಗಾಗಿ ಗಜಪಡೆಗಳ ಭರ್ಜರಿ ತಾಲೀಮು ನಡೆಯುತ್ತಿವೆ. ಫಿರಂಗಿ ಮೂಲಕ ಗುಂಡು ಹಾರಿಸಿ ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು ನಡೆಯುತ್ತಿದೆ. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಈ ತರಬೇತಿ ನಡೆಯುತ್ತಿದೆ.
ಮೈಸೂರು, ಸೆಪ್ಟೆಂಬರ್ 20: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ 2025 ರ ಸಂಭ್ರಮ ಜೋರಾಗಿದೆ. ಮೈಸೂರು ದಸರಾ ಎಂದಾಕ್ಷಣ ನೆನಪಾಗುವುದೇ ಜಂಬೂ ಸವಾರಿ. ಈ ಬಾರಿಯ ಜಂಬೂ ಸವಾರಿಗಾಗಿ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಗಜಪಡೆಗಳ ಭರ್ಜರಿ ತಾಲೀಮು ನಡೆಯುತ್ತಿವೆ. ಫಿರಂಗಿ ಮೂಲಕ ಗುಂಡು ಹಾರಿಸಿ ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು ನಡೆತಯುತ್ತಿದೆ. ಅರಮನೆ ಅಂಗಳದಲ್ಲಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ದಸರಾ ಗಜಪಡೆಗಳಿಗೆ ತರಬೇತಿ ನಡೆಯುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 20, 2025 02:52 PM
