Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಉತ್ಸವ-2022: ಉತ್ಸವಮೂರ್ತಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿಗಳಿಂದ ಪೂಜೆ

ಮೈಸೂರು ದಸರಾ ಉತ್ಸವ-2022: ಉತ್ಸವಮೂರ್ತಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿಗಳಿಂದ ಪೂಜೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 05, 2022 | 11:18 AM

ಪೂಜೆಯ ಬಳಿಕ ತೆರೆದ ವಾಹನವೊಂದರಲ್ಲಿ ಉತ್ಸವಮೂರ್ತಿಯನ್ನು ಅರಮನೆಯತ್ತ ಕೊಂಡೊಯ್ಯಲಾಯಿತು.

ಮೈಸೂರಲ್ಲಿ ಬುಧವಾರ ನಡೆಯಲಿರುವ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ ನಾಡದೇವತೆ ಮತ್ತು ದಸರಾ ಹಬ್ಬದ ಎಲ್ಲ ಕಾರ್ಯಕ್ರಮಗಳ ಉತ್ಸವಮೂರ್ತಿ (presiding deity) ಚಾಮುಂಡೇಶ್ವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್  (ST Somashekhar) ಮತ್ತು ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರು ಜೊತೆಗಿದ್ದರು. ಪೂಜೆಯ ಬಳಿಕ ತೆರೆದ ವಾಹನವೊಂದರಲ್ಲಿ ಉತ್ಸವಮೂರ್ತಿಯನ್ನು ಅರಮನೆಯತ್ತ ಕೊಂಡೊಯ್ಯಲಾಯಿತು.