Himachal Pradesh Floods: ಕುಲು-ಮನಾಲಿ ಪ್ರವಾಸಕ್ಕೆ ತೆರಳಿದ್ದ ಮೈಸೂರು ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ, ನಾಳೆ ವಾಪಸ್ಸು ಬರಲಿದ್ದಾರೆ!

Himachal Pradesh Floods: ಕುಲು-ಮನಾಲಿ ಪ್ರವಾಸಕ್ಕೆ ತೆರಳಿದ್ದ ಮೈಸೂರು ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ, ನಾಳೆ ವಾಪಸ್ಸು ಬರಲಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2023 | 10:45 AM

ಅವರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದ ಟಿವಿ9 ಕನ್ನಡ ವಾಹಿನಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಮೈಸೂರು: ಮೂರ್ನಾಲ್ಕು ದಿನಗಳ ಹಿಂದೆ ಮೈಸೂರಿಂದ ಹಿಮಾಚಲ ಪ್ರದೇಶದಲ್ಲಿರುವ (Himachal Pradesh) ಕುಲು-ಮನಾಲಿ ಪ್ರವಾಸಕ್ಕೆ ಹೋಗಿರುವ ಕನ್ನಡಿಗರು (Kannadigas) ಕುಟುಂಬಸ್ಥರ ಸಂಪರ್ಕಕ್ಕೆ ಸಿಗದ ವರದಿಯೊಂದನ್ನು ನಿಮ್ಮ ಗಮನಕ್ಕೆ ತಂದಿದ್ದೆವು. ವಿಪರೀತ ಮಳೆ ಹಾಗೂ ಪ್ರವಾಹದ ಅಬ್ಬರದಿಂದ ಅವರ ಫೋನ್ ಗಳು ನಾಟ್ ರೀಚೇಬಲ್ (not reachable) ಆಗಿದ್ದವು. ಸಂತಸದ ಸಂಗತಿಯೆಂದರೆ ಪ್ರವಾಸಕ್ಕೆ ತೆರಳಿದ್ದ ಕೇವಲ ಒಂದೆರಡು ಕುಟುಂಬಗಳಲ್ಲ, ಪ್ಯಾಕೇಜ್ ಟೂರ್ ಸ್ಕೀಮ್ ಅಡಿ ಮೈಸೂರಿಂದ ಅಲ್ಲಿಗೆ ಹೋಗಿದ್ದ ಎಲ್ಲ 120 ಮೈಸೂರಿಗರು ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ಅವರಲ್ಲಿ ಇಬ್ಬರು ಕಳಿಸಿರುವ ವಿಡಿಯೋ ಸಂದೇಶ ಇಲ್ಲಿದೆ. ಅವರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದ ಟಿವಿ9 ಕನ್ನಡ ವಾಹಿನಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ನಾಳೆ ಅವರು ಕರ್ನಾಟಕಕ್ಕೆ ವಾಪಸ್ಸು ಬರಲಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ