ರೈಸ್ ಪುಲ್ಲಿಂಗ್ ಚೊಂಬಿನ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಮಾಡಿದ ಖದೀಮರು ಅಂದರ್
12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರ ಅವರು ಕಾಯಕವೇ ಕೈಲಾಸ ಅಂದ್ರು. ಆದ್ರೂ ಇನ್ನೂ ಕೆಲ ಸೋಮಾರಿಗಳು ಮೈ ಬಗ್ಗಿಸಿ ದುಡಿಯೋ ಬದಲು, ಅಡ್ಡ ಮಾರ್ಗದಲ್ಲಿ ಹಣಗಳಿಸೋಕೆ ಹೋಗಿ ಅರೆಸ್ಟ್ ಆಗಿದ್ದಾರೆ ಮೈಸೂರಿನಲ್ಲಿ.
ಮೈಸೂರಿನಲ್ಲಿ ರೈಸ್ ಪುಲ್ಲಿಂಗ್ ಚೊಂಬಿನ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಮಾಡಿದ ಖದೀಮರು ಅಂದರ್ | Mysuru Police Arrest A Gang Of Fraudsters In Connection With Rice Pulling Scam In Nanjangud
12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರ ಅವರು ಕಾಯಕವೇ ಕೈಲಾಸ ಅಂದ್ರು. ಆದ್ರೂ ಇನ್ನೂ ಕೆಲ ಸೋಮಾರಿಗಳು ಮೈ ಬಗ್ಗಿಸಿ ದುಡಿಯೋ ಬದಲು, ಅಡ್ಡ ಮಾರ್ಗದಲ್ಲಿ ಹಣಗಳಿಸೋಕೆ ಹೋಗಿ ಅರೆಸ್ಟ್ ಆಗಿದ್ದಾರೆ ಮೈಸೂರಿನಲ್ಲಿ.
ಎರಡು ಸಾವಿರ ಐದು ನೂರು ಮುಖ ಬೆಲೆಯ ಗರಿ ಗರಿ ಕಂತೆ ನೋಟುಗಳು. ಮುಖಕ್ಕೆ ಮಾಸ್ಕ್ ಹಾಕಿ ಸಾಲಾಗಿ ಕುಳಿತ ಆಸಾಮಿಗಳು. ಅಂದ್ಹಾಗೆ ಇವರೆಲ್ಲಾ ಜನರನ್ನು ದಿಢೀರ್ ಶ್ರೀಮಂತರನ್ನಾಗಿ ಮಾಡುತ್ತೇವೆ ಅಂತಾ ವಂಚಿಸುತ್ತಿದ್ದ ಮೈಸೂರು ಬೆಂಗಳೂರಿನ ಖತರ್ನಾಕ್ ಕ್ರಿಮಿಗಳು. ಬೆಂಗಳೂರಿನ ನಟೇಶ್ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್. ಈತನ ಜೊತೆಗೆ ಮೈಸೂರಿನ ಅಮೀರ್ ಖಾನ್, ಮಹೇಶ್ , ಸತೀಶ್ ಹಾಗೂ ಶ್ರೀನಿವಾಸ್. ಇವರೆಲ್ಲರೂ ರೈಸ್ ಪುಲ್ಲಿಂಗ್ ಅದೃಷ್ಟದ ಚೆಂಬಿನ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.