‘‘ಅದಕ್ಕೆ ಅವೈಲೇಬಲ್ ಇದ್ದೀಯಾ’’? ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ

Edited By:

Updated on: Nov 12, 2026 | 12:18 PM

ಮೈಸೂರಿನಲ್ಲಿ ರಾಪಿಡೋ ಚಾಲಕನೊಬ್ಬ ಮಹಿಳೆಯೊಬ್ಬರ ಜತೆ ದೂರವಾಣಿಯಲ್ಲಿ ಅಸಭ್ಯವಾಗಿ ವರ್ತಿಸಿ, ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿರುವ ಆರೋಪ ಕೇಳಿಬಂದಿದೆ. ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಮಹಿಳೆಯರು ದ್ವಿಚಕ್ರ ವಾಹನ ರಾಪಿಡೋ ಬುಕ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸಬೇಕಿದೆ.

ಮೈಸೂರು, ನವೆಂಬರ್ 12: ಮೈಸೂರಿನಲ್ಲಿ ರಾಪಿಡೋ ಚಾಲಕನೊಬ್ಬ ಯುವತಿಯೊಬ್ಬರ ಜತೆ ಅಶ್ಲೀಲ ಪದಗಳನ್ನು ಬಳಸಿ ದೂರವಾಣಿ ಕರೆಯಲ್ಲಿ ಮಾತನಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕುವೆಂಪು ನಗರದಲ್ಲಿ ನಡೆದ ಈ ಘಟನೆ ಕುರಿತು ಯುವತಿ ತನಗಾದ ಅನುಭವವನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಯುವತಿ ರಾಪಿಡೋ ಬುಕ್ ಮಾಡಿದ್ದು, ಚಾಲಕ ಕರೆ ಮಾಡದೆ ಅರೈವ್ ಎಂದು ಗುರುತಿಸಿದ್ದಾನೆ. ಯುವತಿ ಕಂಪನಿಯ ಮೂಲಕ ಚಾಲಕನನ್ನು ಸಂಪರ್ಕಿಸಿದಾಗ, ಆತ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ‘‘ನಾನು ಬಂದಿದ್ದೆ, ಆದರೆ ವಾಪಸ್ ಬಂದೆ’’ ಎಂದು ಚಾಲಕ ಹೇಳಿದ್ದು, ಆಗ ಯುವತಿ ‘‘ಕಾಲ್ ಮಾಡಬೇಕಲ್ವಾ ಸರ್ ನೀವು?’’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಚಾಲಕ ಅಶ್ಲೀಮವಾಗಿ ಮಾತನಾಡಿರುವುದು ರೆಕಾರ್ಡ್ ಆಗಿದೆ.

ಈ ಘಟನೆಯಿಂದ ಮನನೊಂದ ಯುವತಿ, ದ್ವಿಚಕ್ರ ವಾಹನ ರಾಪಿಡೋಗಳನ್ನು ಬುಕ್ ಮಾಡದಂತೆ ಇತರೆ ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ. ಬದಲಿಗೆ, ಸುರಕ್ಷತೆಗಾಗಿ ಆಟೋ ಅಥವಾ ಕ್ಯಾಬ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More