ವೋಟು ಮಾಡದವರ ಹೆಸರನ್ನು ಮತದಾರರ ಪಟ್ಟಯಿಂದ ಕಿತ್ತುಹಾಕಬೇಕು: ಅನಂತನಾಗ್, ಹಿರಿಯ ನಟ

|

Updated on: Apr 26, 2024 | 7:41 PM

ಅಸಲಿಗೆ ಮತದಾನ ಮಾಡದವರ ಬಗ್ಗೆ ಮಾತಾಡಿದ್ದಕ್ಕೆ ಅವರು ಅಕ್ರೋಶ ವ್ಯಕ್ತಪಡಿಸಿದರು. ಯಾಕೆ ವೋಟು ಮಾಡದವರ ಬಗ್ಗೆ ಪ್ರಶ್ನೆ ಕೇಳುತ್ತೀರಿ, ನಾನು ಪ್ರತಿಸಲ ಮತ ಕೇಳಲು ಬಂದಾಗ ಇದೇ ಪ್ರಶ್ನೆ ಕೇಳಲಾಗುತ್ತದೆ, ನನಗೂ ಉತ್ತರಿಸಿ ಹೇವರಿಕೆ ಉಂಟಾಗಿದೆ ಎಂದು ಅನಂತನಾಗ್ ಹೇಳಿದರು.

ಬೆಂಗಳೂರು: ಹಿರಿಯ ನಟ ಅನಂತನಾಗ್ (Anant Nag) ಮಾತು ಖಡಕ್ಕಾಗಿರುತ್ತೆ, ಇವರು ವೃತ್ತಿಪರ ನಟ ಮತ್ತು ಹವ್ಯಾಸಿ ರಾಜಕಾರಣಿ. ಒಂದು ಜಮಾನಾದಲ್ಲಿ ಸೀರಿಯಸ್ ರಾಜಕಾರಣಿ ಅನಿಸಿಕೊಂಡು ದಿವಂಗತ ಜೆಹೆಚ್ ಪಟೇಲ್ (late JH Patel) ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದೂ ಉಂಟು. ಇಂದು ಬೆಂಗಳೂರಲ್ಲಿ ತಮ್ಮ ಕುಟುಂಬದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಅನಂತ್ ನಾಗ್, ಮತ ಚಲಾಯಿಸಲು ಮನೆಯಿಂದ ಹೊರಬಾರದ ಅರ್ಹ ವೋಟರ್ಸ್ (eligible voters) ವಿರುದ್ಧ ಕೆಂಡಕಾರಿದರು. ಅಸಲಿಗೆ ಮತದಾನ ಮಾಡದವರ ಬಗ್ಗೆ ಮಾತಾಡಿದ್ದಕ್ಕೆ ಅವರು ಅಕ್ರೋಶ ವ್ಯಕ್ತಪಡಿಸಿದರು. ಯಾಕೆ ವೋಟು ಮಾಡದವರ ಬಗ್ಗೆ ಪ್ರಶ್ನೆ ಕೇಳುತ್ತೀರಿ, ನಾನು ಪ್ರತಿಸಲ ಮತ ಕೇಳಲು ಬಂದಾಗ ಇದೇ ಪ್ರಶ್ನೆ ಕೇಳಲಾಗುತ್ತದೆ, ನನಗೂ ಉತ್ತರಿಸಿ ಹೇವರಿಕೆ ಉಂಟಾಗಿದೆ ಎಂದು ಅನಂತನಾಗ್ ಹೇಳಿದರು. ವೋಟು ಮಾಡಲು ಬರದ ಜನಕ್ಕೆ ದೇಶದ ಬಗ್ಗೆ ಕಾಳಜಿ ಇಲ್ಲ, ಅವರಿಗೆ ದೇಶದ ಬಗ್ಗೆ ನಮ್ಮ ನಾಯಕರ ಬಗ್ಗೆ ಮಾತಾಡುವ ಯಾವುದೇ ಹಕ್ಕು ಇಲ್ಲ, ಅವರಿಗೆ ಕೊಡಬಹುದಾದ ಶಿಕ್ಷೆಯೆಂದರೆ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕಿತ್ತುಹಾಕುವುದು ಎಂದು ಹಿರಿಯ ನಟ ಕಿಡಿಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರಿನ ಒಂದೇ ಕುಟುಂಬದ 25 ಸದಸ್ಯರು ಒಂದೇ ಮತಗಟ್ಟೆಯಲ್ಲಿ ಒಟ್ಟಿಗೆ ಮತದಾನ ಮಾಡಿದ ಅಪರೂಪದ ಸನ್ನಿವೇಶ!

Published on: Apr 26, 2024 07:36 PM