ಹೇಗಿತ್ತು ನೋಡಿ ನಾಗಿಣಿಯ ನಾಗರ ಪಂಚಮಿ ಸಂಭ್ರಮ
ಜೀ ಕನ್ನಡದಲ್ಲಿ ಪ್ರಸಾರ ಕಂಡಿದ್ದ ‘ನಾಗಿಣಿ 2’ ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ನಾಗಿಣಿ ಆಗಿ ಕಾಣಿಸಿಕೊಂಡಿದ್ದರು. ಅವರು ಈಶಾ ಫೌಂಡೇಷನ್ನಲ್ಲಿ ನಾಗರ ಪಂಚಮಿ ಹಬ್ಬವನ್ನು ಆಚರಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಹಾವುಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಬಂದಿದೆ.
ಆಗಸ್ಟ್ 9ರಂದು ನಾಗರ ಪಂಚಮಿ ಆಚರಿಸಲಾಗಿದೆ. ಅನೇಕ ಮಹಿಳೆಯರು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಿದ್ದಾರೆ. ‘ನಾಗಿಣಿ 2’ ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ನಾಗಿಣಿ ಆಗಿ ಕಾಣಿಸಿಕೊಂಡಿದ್ದರು. ಅವರು ಈಶಾ ಫೌಂಡೇಷನ್ನಲ್ಲಿ ಈ ಹಬ್ಬವನ್ನು ಆಚರಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಹಾವುಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಬಂದಿದೆ. ‘ನಾಗಿಣಿ ಪಾತ್ರ ಮಾಡಿದ್ದೆ. ಆಗಿನಿಂದ ನಾಗ ದೇವರ ಬಗ್ಗೆ ಒಲವು ಜಾಸ್ತಿ. ಇಲ್ಲಿ ಬಂದು ಆಚರಿಸುತ್ತಿರುವುದು ಖುಷಿ ಇದೆ. ಇಲ್ಲಿಯ ಪೂಜೆ ನೋಡಿ ಖುಷಿ ಆಗುತ್ತದೆ. ನಾನು ಮೊದಲ ಬಾರಿಗೆ ಬಂದಿದ್ದೇನೆ. ನನ್ನ ಅಮ್ಮನಿಗೆ ಈ ಜಾಗ ಇಷ್ಟ ಆಯ್ತು. ಬೇಡಿಕೊಂಡಿದ್ದು ಹೇಳಿಕೊಳ್ಳಲ್ಲ’ ಎಂದಿದ್ದಾರೆ ನಮ್ರತಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.