Modi Kannada: ಮನ್ ಕೀ ಬಾತ್​ನಲ್ಲಿ ಮೋದಿಯ ಕನ್ನಡ ಧ್ವನಿ; ಅಚ್ಚರಿ ಹುಟ್ಟಿಸಿದೆ ಎಐ ಸೃಷ್ಟಿ

Updated on: Oct 26, 2025 | 4:03 PM

Narendra Modi Mann ki Baaat AI generated audio in Kannada: ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಬಹಳ ವಿಶೇಷ ಎನಿಸಿದೆ. ಪ್ರಧಾನಿಗಳು ಈ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡುವುದು. ಈ ಬಾರಿಯೂ ಹಿಂದಿಯಲ್ಲೇ ಮಾತನಾಡಿದ್ದಾರೆ. ಆದರೆ, ಬೇರೆ ಬೇರೆ ಭಾಷೆಗಳಲ್ಲಿ ಧ್ವನಿ ಡಬ್ ಮಾಡಿ ಪ್ರಸಾರ ಮಾಡಲಾಗಿದೆ. ಎಐನಿಂದ ಧ್ವನಿ ಜನರೇಟ್ ಮಾಡಲಾಗಿದೆ. ನರೇಂದ್ರ ಮೋದಿ ಅವರ ಧ್ವನಿಯನ್ನೇ ಬಹುತೇಕ ಹೋಲುವಂತೆ ಎಐನಿಂದ ಬೇರೆ ಬೇರೆ ಭಾಷೆಗಳಲ್ಲಿ ಧ್ವನಿ ಸೃಷ್ಟಿಸಲಾಗಿದೆ.

ನವದೆಹಲಿ, ಅಕ್ಟೋಬರ್ 26: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 127ನೇ ಮನ್ ಕೀ ಬಾತ್ (Mann Ki Baat) ರೇಡಿಯೋ ಕಾರ್ಯಕ್ರಮ ಬಹಳ ವಿಶೇಷ ಎನಿಸಿದೆ. ಪ್ರಧಾನಿಗಳು ಈ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡುವುದು. ಈ ಬಾರಿಯೂ ಹಿಂದಿಯಲ್ಲೇ ಮಾತನಾಡಿದ್ದಾರೆ. ಆದರೆ, ಬೇರೆ ಬೇರೆ ಭಾಷೆಗಳಲ್ಲಿ ಧ್ವನಿ ಡಬ್ ಮಾಡಿ ಪ್ರಸಾರ ಮಾಡಲಾಗಿದೆ. ಎಐನಿಂದ ಧ್ವನಿ ಜನರೇಟ್ ಮಾಡಲಾಗಿದೆ. ನರೇಂದ್ರ ಮೋದಿ ಅವರ ಧ್ವನಿಯನ್ನೇ ಬಹುತೇಕ ಹೋಲುವಂತೆ ಎಐನಿಂದ ಬೇರೆ ಬೇರೆ ಭಾಷೆಗಳಲ್ಲಿ ಧ್ವನಿ ಸೃಷ್ಟಿಸಲಾಗಿದೆ.

ಕನ್ನಡ, ತಮಿಳು, ಒಡಿಯಾ ಮೊದಲಾದ ಹಲವು ಭಾರತೀಯ ಭಾಷೆಗಳಲ್ಲಿ ಎಐ ಸೃಷ್ಟಿತ ಧ್ವನಿ ಕೊಡಲಾಗಿದೆ. ಕನ್ನಡದ ಆಡಿಯೋ ಕೇಳಿದಾಗ ಥೇಟ್ ನರೇಂದ್ರ ಮೋದಿ ಅವರೇ ಮಾತನಾಡಿದಂತೆ ಭಾಷವಾಗುತ್ತದೆ. ಅಷ್ಟರಮಟ್ಟಿಗೆ ಎಐ ನಿಖರತೆ ಕಾಯ್ದುಕೊಂಡಿದೆ.

ಇದನ್ನೂ ಓದಿ: Mann Ki Baat: ಪ್ಲಾಸ್ಟಿಕ್ ತಂದುಕೊಡಿ, ಹೊಟ್ಟೆ ತುಂಬಾ ಊಟ ಮಾಡಿ, ಛತ್ತೀಸ್​ಗಢದ ವಿಶೇಷ ಕೆಫೆ ಬಗ್ಗೆ ಮೋದಿ ಪ್ರಸ್ತಾಪ

ನರೇಂದ್ರ ಮೋದಿ ತಮ್ಮ ಈ ವಾರದ ಮನ್ ಕೀ ಬಾತ್ ಎಪಿಸೋಡ್​ನಲ್ಲಿ ವಂದೇ ಮಾತರಂ ಹಾಡು ರಚನೆಯ 150ನೇ ವಾರ್ಷಿಕೋತ್ಸವದ ಬಗ್ಗೆ ಮಾತನಾಡಿದ್ದಾರೆ. ‘ಎಖ್ ಪೇಡ್ ಮಾ ಕೆ ನಾಮ್’ (ಒಂದು ಮರ, ಅಮ್ಮನ ಹೆಸರು) ಎನ್ನುವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ. ಛತ್ತೀಸ್​ಗಡದಲ್ಲಿ ಗಮನ ಸೆಳೆಯುತ್ತಿರುವ ಗಾರ್ಬೇಜ್ ಕೆಫೆಗಳ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ