Video: ಉತ್ತರ ಪ್ರದೇಶದಲ್ಲಿ ಹೊತ್ತಿ ಉರಿದ ಡಬಲ್ ಡೆಕ್ಕರ್ ಬಸ್
ಭಾನುವಾರ ಮುಂಜಾನೆ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ದೊಡ್ಡ ಅಪಘಾತವು ಕೂದಲೆಳೆ ಅಂತರದಲ್ಲಿ ತಪ್ಪಿದೆ. ದೆಹಲಿಯಿಂದ ಗೊಂಡಾಗೆ ಪ್ರಯಾಣಿಸುತ್ತಿದ್ದ ಡಬಲ್ ಡೆಕ್ಕರ್ ಬಸ್‌ನ ಒಂದು ಟೈರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಕಾರಣ ಬಸ್ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯು ಇಡೀ ವಾಹನವನ್ನು ಆವರಿಸುವ ಮೊದಲು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಆಗ್ರಾ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾದ ಸ್ವಲ್ಪ ಹಿಂದೆ, ಕಾಕೋರಿ ಪೊಲೀಸ್ ಠಾಣೆ ಪ್ರದೇಶದ ಬಳಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಆಂಧ್ರ ಪ್ರದೇಶದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ವೋಲ್ವೊ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ಸಾವನ್ನಪ್ಪಿದ್ದರು.
ಉತ್ತರ ಪ್ರದೇಶ, ಅಕ್ಟೋಬರ್ 26: ಭಾನುವಾರ ಮುಂಜಾನೆ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ದೊಡ್ಡ ಅಪಘಾತವು ಕೂದಲೆಳೆ ಅಂತರದಲ್ಲಿ ತಪ್ಪಿದೆ. ದೆಹಲಿಯಿಂದ ಗೊಂಡಾಗೆ ಪ್ರಯಾಣಿಸುತ್ತಿದ್ದ ಡಬಲ್ ಡೆಕ್ಕರ್ ಬಸ್‌ನ ಒಂದು ಟೈರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಕಾರಣ ಬಸ್ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯು ಇಡೀ ವಾಹನವನ್ನು ಆವರಿಸುವ ಮೊದಲು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಆಗ್ರಾ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾದ ಸ್ವಲ್ಪ ಹಿಂದೆ, ಕಾಕೋರಿ ಪೊಲೀಸ್ ಠಾಣೆ ಪ್ರದೇಶದ ಬಳಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಆಂಧ್ರ ಪ್ರದೇಶದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ವೋಲ್ವೊ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ಸಾವನ್ನಪ್ಪಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
'ಕೈ' ಟಿಕೆಟ್ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್ನ ಅತಿದೊಡ್ಡ ಎಲ್ಎನ್ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ

