Video: ಬಿಹಾರ: ಭಾಷಣ ಆರಂಭಿಸುತ್ತಿದ್ದಂತೆ ಕುಸಿದುಬಿದ್ದ ವೇದಿಕೆ, ಜೆಡಿಯು ನಾಯಕ ಅನಂತ್ ಸಿಂಗ್ ಅಪಾಯದಿಂದ ಪಾರು
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಎಲ್ಲಾ ಪಕ್ಷಗಳು ಭರ್ಜರಿಯ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಜೆಡಿಯು ನಾಯಕ ಅನಂತ್ ಸಿಂಗ್ ಇದ್ದ ವೇದಿಕೆ ಕುಸಿದುಬಿದ್ದಿರುವ ಘಟನೆ ವರದಿಯಾಗಿದೆ. ನಾಯಕರು ನಿಂತಿದ್ದ ವೇದಿಕೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಶನಿವಾರ ಸಿಂಗ್ ರಾಂಪುರ್ ದುಮ್ರಾ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಿಂಗ್ ಅವರ ಬೆಂಬಲಿಗರು ಒಂದು ಸಣ್ಣ ವೇದಿಕೆಯನ್ನು ನಿರ್ಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಕೇಳಿಕೊಂಡಿದ್ದರು.
ಪಾಟ್ನಾ, ಅಕ್ಟೋಬರ್ 26: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಎಲ್ಲಾ ಪಕ್ಷಗಳು ಭರ್ಜರಿಯ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಜೆಡಿಯು ನಾಯಕ ಅನಂತ್ ಸಿಂಗ್ ಕೂಡ ಪ್ರಚಾರ ಕಾರ್ಯಕ್ಕಾಗಿ ದುಮ್ರಾಗೆ ಬಂದಿದ್ದರು. ಅವರು ಇದ್ದ ವೇದಿಕೆ ಕುಸಿದುಬಿದ್ದಿರುವ ಘಟನೆ ವರದಿಯಾಗಿದೆ. ನಾಯಕರು ನಿಂತಿದ್ದ ವೇದಿಕೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಅನಿರೀಕ್ಷಿತ ಘಟನೆಯೊಂದು ನಡೆದಿದೆ.
ಶನಿವಾರ ಸಿಂಗ್ ರಾಂಪುರ್ ದುಮ್ರಾ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಿಂಗ್ ಅವರ ಬೆಂಬಲಿಗರು ಒಂದು ಸಣ್ಣ ವೇದಿಕೆಯನ್ನು ನಿರ್ಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಕೇಳಿಕೊಂಡಿದ್ದರು. ಜೆಡಿಯು ಜಿಂದಾಬಾದ್, ನಿತೀಶ್ ಕುಮಾರ್ ಜಿಂದಾಬಾದ್ ಮತ್ತು ಅನಂತ್ ಬಾಬು ಜಿಂದಾಬಾದ್ ಎಂದು ಕೂಗುತ್ತಿದ್ದಂತೆ ಅನಂತ್ ಸಿಂಗ್ ಮಾತನಾಡಲು ವೇದಿಕೆಯ ಮೇಲೆ ಬಂದರು ಆ ಸಮಯದಲ್ಲಿ ವೇದಿಕೆ ಕುಸಿದಿದೆ. ಜೆಡಿಯು ನಾಯಕ ಯಾವುದೇ ಗಾಯಗಳಿಲ್ಲದೆ ಪಾರಾದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

