Daily Devotional: ನವರಾತ್ರಿಯ 6ನೇ ದಿನ, ಸ್ಕಂದಮಾತೆಗೆ ಯಾವ ನೈವೇದ್ಯ ಅರ್ಪಿಸಬೇಕು?
ನವರಾತ್ರಿ ಮಹೋತ್ಸವದಲ್ಲಿ ಸ್ಕಂದಮಾತಾ ದೇವಿಯ ಆರಾಧನೆ ವಿಶೇಷವಾಗಿದೆ. ಪಂಚಮಿ ತಿಥಿಯಂದು ಆಚರಿಸಲಾಗುವ ಈ ಪೂಜೆಯಲ್ಲಿ ದೇವಿಗೆ ಕೋಸಂಬರಿ, ಚಿತ್ರಾನ್ನ ಮತ್ತು ಸಬ್ಬಕ್ಕಿ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಬಹುದು. ಓಂ ಐಮ್ ಹ್ರೀಮ್ ಶ್ರೀಮ್ ಸ್ಕಂದ ಮಾತಾಯೈ ನಮಃ ಮಂತ್ರ ಜಪಿಸುವುದರಿಂದ ಜ್ಞಾನ ಮತ್ತು ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ.
ಬೆಂಗಳೂರು, ಸೆಪ್ಟೆಂಬರ್ 27: ನವರಾತ್ರಿಯ ಶುಭ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆಯು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಪಂಚಮಿ ತಿಥಿಯಂದು ಸ್ಕಂದಮಾತಾ ದೇವಿಯ ಪೂಜೆಯನ್ನು ನಡೆಸಲಾಗುತ್ತದೆ. ಸ್ಕಂದಮಾತಾ ಎಂದರೆ ಸಾಕ್ಷಾತ್ ಸುಬ್ರಹ್ಮಣ್ಯನ ತಾಯಿ. ಆಕೆಯನ್ನು ಷಣ್ಮುಖನ ತಾಯಿ ಎಂದೂ ಕರೆಯಲಾಗುತ್ತದೆ. ನಾಲ್ಕು ಭುಜಗಳು ಮತ್ತು ನಾಲ್ಕು ಹಸ್ತಗಳನ್ನು ಹೊಂದಿರುವ ಈ ದೇವಿ ಸಿಂಹ ವಾಹನೆಯಾಗಿದ್ದಾಳೆ. ಸ್ಕಂದಮಾತಾ ದೇವಿಗೆ ಹಳದಿ ಅಥವಾ ಚಿನ್ನದ ಬಣ್ಣದ ವಸ್ತ್ರಗಳನ್ನು ಅಲಂಕಾರವಾಗಿ ಅರ್ಪಿಸುವುದು ಶ್ರೇಷ್ಠ. ಪೂಜೆಯ ಸಂದರ್ಭದಲ್ಲಿ ಕೋಸಂಬರಿ, ಚಿತ್ರಾನ್ನ ಮತ್ತು ಸಬ್ಬಕ್ಕಿ ಪಾಯಸವನ್ನು ನೈವೇದ್ಯವಾಗಿ ಅರ್ಪಿಸುವುದು ವಾಡಿಕೆ.
