AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಳಿ ಗುದ್ದಿದ ರಭಸಕ್ಕೆ ಮೇಲಕ್ಕೆ ಹಾರಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ; ಆಮೇಲೇನಾಯ್ತು?

ಗೂಳಿ ಗುದ್ದಿದ ರಭಸಕ್ಕೆ ಮೇಲಕ್ಕೆ ಹಾರಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ; ಆಮೇಲೇನಾಯ್ತು?

ಸುಷ್ಮಾ ಚಕ್ರೆ
|

Updated on: Sep 26, 2025 | 10:36 PM

Share

ಝಾನ್ಸಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೀದಿ ಗೂಳಿಯೊಂದು ಮಹಿಳೆಯನ್ನು ಗುದ್ದಿ, ಆಕೆಯನ್ನು ಹಲವಾರು ಅಡಿಗಳಷ್ಟು ಮೇಲೆ ಗಾಳಿಯಲ್ಲಿ ಎಸೆದು, ಪ್ರಜ್ಞಾಹೀನಳನ್ನಾಗಿ ಮಾಡಿದೆ. ಈ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಝಾನ್ಸಿಯ ಬಬಿನಾ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸೆಪ್ಟೆಂಬರ್ 25ರಂದು ಸಂಜೆ 5 ಗಂಟೆ ಸುಮಾರಿಗೆ ಕಿರಿದಾದ ಹಾದಿಯಲ್ಲಿ ನಡೆಯುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿತು.

ಝಾನ್ಸಿ, ಸೆಪ್ಟೆಂಬರ್ 26: ಉತ್ತರ ಪ್ರದೇಶದ ಝಾನ್ಸಿಯ ಬಬಿನಾ ಗ್ರಾಮದಲ್ಲಿ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಬೀದಿ ಬದಿಯ ಗೂಳಿಯೊಂದು ತನ್ನ ಪಾಡಿಗೆ ನಡೆದುಹೋಗುತ್ತಿದ್ದ 60 ವರ್ಷದ ಮಹಿಳೆಗೆ ಹಿಂದಿನಿಂದ ಗುದ್ದಿದೆ. ಗೂಳಿ ಗುದ್ದಿದ ರಭಸಕ್ಕೆ ಆ ಮಹಿಳೆ 4 ಅಡಿ ಮೇಲಕ್ಕೆ ಹಾರಿ ಗೂಳಿಯ ಹಿಂಭಾಗಕ್ಕೆ ಬಿದ್ದಿದ್ದಾರೆ. ಆಘಾತದಿಂದ ಆಕೆಯ ಪ್ರಜ್ಞೆ ತಪ್ಪಿದೆ. ಆದರೂ ಬಿಡದ ಆ ಗೂಳಿ ಮತ್ತೆ ನೆಲದ ಮೇಲೆ ಬಿದ್ದಿದ್ದ ಆ ಮಹಿಳೆಯತ್ತ ಬಂದಿದೆ. ಅದೃಷ್ಟವಶಾತ್ ಅಷ್ಟರಲ್ಲಿ ಬೈಕ್​ನಲ್ಲಿ ಯುವಕನೊಬ್ಬ ಬಂದಿದ್ದರಿಂದ ಆ ಗೂಳಿ ಮುಂದೆ ಹೋಗಿದೆ. ಸೆಪ್ಟೆಂಬರ್ 25ರಂದು ಸಂಜೆ ಊರಿನೊಳಗಿನ ಸಣ್ಣ ಕಾಲೋನಿಯಲ್ಲಿ ನಡೆದ ಈ ಘಟನೆಯ 17 ಸೆಕೆಂಡುಗಳ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ