AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಮಾಮೂಲಿ ಗರ್ಬಾ ಅಲ್ಲ; ಬೆಂಕಿಯನ್ನು ಹಿಡಿದು ಕುಣಿಯುವ ಮಶಾಲ್ ರಾಸ್ ಮೈನವಿರೇಳಿಸುವ ವಿಡಿಯೋ ಇಲ್ಲಿದೆ

ಇದು ಮಾಮೂಲಿ ಗರ್ಬಾ ಅಲ್ಲ; ಬೆಂಕಿಯನ್ನು ಹಿಡಿದು ಕುಣಿಯುವ ಮಶಾಲ್ ರಾಸ್ ಮೈನವಿರೇಳಿಸುವ ವಿಡಿಯೋ ಇಲ್ಲಿದೆ

ಸುಷ್ಮಾ ಚಕ್ರೆ
|

Updated on: Sep 26, 2025 | 10:10 PM

Share

ಜಾಮ್ನಗರವು ತನ್ನ ವಿಶಿಷ್ಟವಾದ ಮಶಾಲ್ ರಾಸ್‌ನಿಂದಾಗಿ ಗಮನ ಸೆಳೆಯುತ್ತದೆ. ಮಶಾಲ್ ರಾಸ್ ಎಂದರೆ ಮಾಮೂಲಿ ಗರ್ಬಾ ನೃತ್ಯವಲ್ಲ, ಇದು ಬೆಂಕಿಯ ದೊಂದಿಗಳನ್ನು ಹಿಡಿದು ಕುಣಿಯುವ ಸಾಂಪ್ರದಾಯಿಕ ನೃತ್ಯ. ಮೂಲಗಳ ಪ್ರಕಾರ, 1957ರಲ್ಲಿ ಶ್ರೀ ಪಟೇಲ್ ಯುವಕ್ ಗರ್ಬಿ ಮಂಡಲ್ ಪರಿಚಯಿಸಿದ ಈ ಅದ್ಭುತ ನೃತ್ಯ ಪ್ರಕಾರವನ್ನು ದಶಕಗಳಿಂದ ಉತ್ಸಾಹಭರಿತ ಸ್ಥಳೀಯ ಗರ್ಬಾ ಗುಂಪುಗಳು ಜೀವಂತವಾಗಿರಿಸಿವೆ.

ಜಾಮ್ನಗರ್, ಸೆಪ್ಟೆಂಬರ್ 26: ಗುಜರಾತ್‌ನಲ್ಲಿ ನವರಾತ್ರಿ ಆಚರಣೆಯ (Navaratri Celebration) ವೇಳೆ ಕೆಲವು ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ. ಇಲ್ಲಿನ ಜಾಮ್ನಗರವು ತನ್ನ ವಿಶಿಷ್ಟವಾದ ಮಶಾಲ್ ರಾಸ್‌ನಿಂದಾಗಿ ಗಮನ ಸೆಳೆಯುತ್ತದೆ. ಮಶಾಲ್ ರಾಸ್ ಎಂದರೆ ಮಾಮೂಲಿ ಗರ್ಬಾ ನೃತ್ಯವಲ್ಲ, ಇದು ಬೆಂಕಿಯ ದೊಂದಿಗಳನ್ನು ಹಿಡಿದು ಕುಣಿಯುವ ಸಾಂಪ್ರದಾಯಿಕ ನೃತ್ಯ. ಮೂಲಗಳ ಪ್ರಕಾರ, 1957ರಲ್ಲಿ ಶ್ರೀ ಪಟೇಲ್ ಯುವಕ್ ಗರ್ಬಿ ಮಂಡಲ್ ಪರಿಚಯಿಸಿದ ಈ ಅದ್ಭುತ ನೃತ್ಯ ಪ್ರಕಾರವನ್ನು ದಶಕಗಳಿಂದ ಉತ್ಸಾಹಭರಿತ ಸ್ಥಳೀಯ ಗರ್ಬಾ ಗುಂಪುಗಳು ಜೀವಂತವಾಗಿರಿಸಿವೆ.

ಇದು ಸಾಮಾನ್ಯ ಗರ್ಬಾ ಅಥವಾ ದಾಂಡಿಯಾಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲಿ ನರ್ತಕರು ಉರಿಯುತ್ತಿರುವ ಪಂಜುಗಳೊಂದಿಗೆ ಪ್ರದರ್ಶನ ನೀಡುತ್ತಾರೆ. ಹಾಗೇ, ನವರಾತ್ರಿ ಹಬ್ಬದ ರಾತ್ರಿಯನ್ನು ಭಕ್ತಿ ಮತ್ತು ಶೌರ್ಯದ ಪ್ರದರ್ಶನವಾಗಿ ಪರಿವರ್ತಿಸುತ್ತಾರೆ. ಮಶಾಲ್ ರಾಸ್‌ನ ಪ್ರಮುಖ ಅಂಶವೆಂದರೆ ಪ್ರದರ್ಶಕರು ಉರಿಯುತ್ತಿರುವ ಪಂಜುಗಳನ್ನು ಹಿಡಿದು ಗರ್ಬಾದ ಲಯಕ್ಕೆ ತಿರುಗಿ ಚಲಿಸುವುದಲ್ಲದೆ, ನೆಲದ ಮೇಲೆ ಬೆಂಕಿಯನ್ನು ಹರಡಿ ಅದರ ಮೇಲೆ ನೃತ್ಯ ಮಾಡುತ್ತಾರೆ. ಇದು ಕೇವಲ ಮನರಂಜನೆಯಲ್ಲ, ಇದು ನಂಬಿಕೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಅಭಿವ್ಯಕ್ತಿಯಾಗಿದೆ. ಈ ನೃತ್ಯವನ್ನು ನೋಡಲೆಂದೇ ನವರಾತ್ರಿ ವೇಳೆ ಅನೇಕ ರಾಜ್ಯಗಳ ಜನರು ಜಾಮ್ನಗರಕ್ಕೆ ಬರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ