Udupi Video Incident: ಸಂತ್ರಸ್ತೆ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯನ್ನು ಇಂದು ಭೇಟಿಯಾಗಲಿರುವ ಖುಷ್ಬೂ

Udupi Video Incident: ಸಂತ್ರಸ್ತೆ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯನ್ನು ಇಂದು ಭೇಟಿಯಾಗಲಿರುವ ಖುಷ್ಬೂ

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 27, 2023 | 12:00 PM

ವಿಡಿಯೋದಲ್ಲಿ ಇನ್ನೂ ಯಾವುದೇ ಸಾಕ್ಷ್ಯಾಧಾರ ಪೊಲೀಸರಿಗೆ ಲಭ್ಯವಾಗಿಲ್ಲ ಮತ್ತು ಘಟನೆಯನ್ನು ಯಾವುದೇ ಕೋಮಿನೊಂದಿಗೆ ಸಂಬಂಧ ಕಲ್ಪಿಸದಂತೆ ಖುಷ್ಬೂ ಜನರಲ್ಲಿ ಮನವಿ ಮಾಡಿದ್ದಾರೆ.

ಉಡುಪಿ: ನಗರದ ಕಾಲೇಜೊಂದ ವಾಷ್ ರೂಮೊಂದರಲ್ಲಿ ಯುವತಿಯೊಬ್ಬಳ ವಿಡಿಯೋ ಚಿತ್ರೀಕರಿಸಿರುವ (video recording) ಆರೋಪದ ಪ್ರಕರಣದಲ್ಲಿ ತನಿಖೆ ಚುರಕುಗೊಗೊಂಡಿದೆ. ಕೇಸ್ ಸಂಬಂಧಿಸಿದಂತೆ ಅಲ್ಪಸಮುದಾಯಕ್ಕೆ ಸೇರಿದ ಮೂವರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ (Khushboo Sundar) ಬುಧವಾರ ಉಡುಪಿಗೆ ಆಗಮಿಸಿದ್ದು ಇಂದು ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂತ್ರಸ್ತೆಯ ಪೋಷಕರನ್ನು (parents of victim) ಮಾತಾಡಿಸಲಿದ್ದಾರೆ. ವಿಡಿಯೋದಲ್ಲಿ ಇನ್ನೂ ಯಾವುದೇ ಸಾಕ್ಷ್ಯಾಧಾರ ಪೊಲೀಸರಿಗೆ ಲಭ್ಯವಾಗಿಲ್ಲ ಮತ್ತು ಘಟನೆಯನ್ನು ಯಾವುದೇ ಕೋಮಿನೊಂದಿಗೆ ಸಂಬಂಧ ಕಲ್ಪಿಸದಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕ ಘಟನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಲು ನಿರ್ಧರಿಸದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆ ಪ್ರಕರಣದ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಏತನ್ಮಧ್ಯೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇಂದು ನಗರಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Jul 27, 2023 11:44 AM